ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌ನಲ್ಲಿ ಮತ್ತಷ್ಟು ಹೊಸ ರೂಪಾಂತರಿ ಕೊರೊನಾ ವೈರಸ್‌: 43 ಪ್ರಕರಣಗಳು ಪತ್ತೆ

Last Updated 2 ಫೆಬ್ರುವರಿ 2021, 14:42 IST
ಅಕ್ಷರ ಗಾತ್ರ

ಲಂಡನ್‌: ಬ್ರಿಟನ್‌ನ ಬ್ರಿಸ್ಟಲ್ ಮತ್ತು ಲಿವರ್‌ಪೂಲ್‌ನಲ್ಲಿ ಹೊಸ ರೂಪಾಂತರಿ ಕೊರೊನಾ ವೈರಸ್‌ಗಳ ಒಟ್ಟು 43 ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂದು ಬ್ರಿಟಿಷ್ ಆರೋಗ್ಯ ಸಚಿವ ಮ್ಯಾಟ್ ಹ್ಯಾನ್‌ಕಾಕ್ ಮಂಗಳವಾರ ಹೇಳಿದ್ದಾರೆ. 'ರೂಪಾಂತರಿ ಕೊರೊನಾ ವೈರಸ್‌ಗಳು ಕಾಣಿಸಿಕೊಳ್ಳುತ್ತಿರುವುದರ ಅರ್ಥ ಸರ್ಕಾರ ಅತ್ಯಂತ ಜಾಗರೂಕವಾಗಿರಬೇಕು ಎಂಬುದಾಗಿದೆ,' ಎಂದು ಅವರು ಹೇಳಿದ್ದಾರೆ.

'ಬ್ರಿಸ್ಟಲ್‌ನಲ್ಲಿ 11 ಮತ್ತು ಲಿವರ್‌ಪೂಲ್‌ನಲ್ಲಿ 32 ರೂಪಾಂತರಿ ವೈರಸ್‌ನ ಸೋಂಕು ಪ್ರಕರಣಗಳು ನಮಗೆ ಕಂಡು ಬಂದಿವೆ,' ಎಂದು ಹ್ಯಾನ್‌ಕಾಕ್ ಸಂಸದರಿಗೆ ತಿಳಿಸಿದ್ದಾರೆ. ಇದರ ಜೊತೆಗೆ ದಕ್ಷಿಣ ಆಫ್ರಿಕಾ ಮಾದರಿಯ 11 ಪ್ರಕರಣಗಳೂ ಪತ್ತೆಯಾಗಿವೆ. ಆದರೆ, ಯಾರಿಗೂ ಅಂತರರಾಷ್ಟ್ರೀಯ ಪ್ರಯಾಣದ ಹಿನ್ನೆಲೆ ಇಲ್ಲ,' ಎಂದು ಅವರು ತಿಳಿಸಿದ್ದಾರೆ.

ಬ್ರಿಟನ್‌ ಮಾದರಿಯ ರೂಪಾಂತರಿ ಕೊರೊನಾ ಸೋಂಕು ಈಗಾಗಲೇ ಎರಡನೇ ಹಂತದ ಬೆದರಿಕೆಯನ್ನು ಜಗತ್ತಿಗೆ ಎಸೆದಿದ್ದಾಗಿದೆ. ಹೀಗಿರುವಾಗಲೇ ಬ್ರಿಟನ್‌ನಲ್ಲಿ ಮತ್ತಷ್ಟು ಹೊಸ ರೂಪಾಂತರಿ ವೈರಸ್‌ಗಳು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

'ನಾವು ಅತ್ಯಂತ ಜಾಗರೂಕವಾಗಿ ಮುಂದೆ ಸಾಗಬೇಕಿದೆ. ಹೊಸ ಮಾದರಿಯ ರೂಪಾಂತರಿ ಕೊರೊನಾ ವೈರಸ್‌ಗಳಿಂದ ಹೊಸ ಬಗೆಯ ಸವಾಲುಗಳು ನಮಗೆ ಎದುರಾಗುತ್ತಿವೆ,' ಎಂದು ಹ್ಯಾನ್‌ಕಾಕ್‌ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT