ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಪುನರಾರಂಭ: ಮಕ್ಕಳನ್ನು ಸಜ್ಜುಗೊಳಿಸಲು ಬ್ರಿಟನ್‌ ಪ್ರಧಾನಿ ಮನವಿ

Last Updated 24 ಆಗಸ್ಟ್ 2020, 5:53 IST
ಅಕ್ಷರ ಗಾತ್ರ

ಲಂಡನ್: ಕೊರೊನಾ – ಲಾಕ್‌ಡೌನ್‌ನಿಂದಾಗಿ ಐದು ತಿಂಗಳಿನಿಂದ ಮುಚ್ಚಿದ್ದ ಶಾಲೆಗಳನ್ನು ಮುಂದಿನ ತಿಂಗಳಿನಿಂದ ಪುನರಾರಂಭಿಸಲು ಸಿದ್ಧತೆ ನಡೆಸಿರುವ ಬ್ರಿಟನ್ ಸರ್ಕಾರ, ಮಕ್ಕಳನ್ನು ಶಾಲೆಗೆ ಕಳಿಸಲು ಅಣಿಗೊಳಿಸುವಂತೆ ಪೋಷಕರಲ್ಲಿ ಮನವಿ ಮಾಡಿದೆ.

ಮಕ್ಕಳಲ್ಲಿರುವ ಕೊರೊನಾ ಭಯವನ್ನು ಹೋಗಲಾಡಿಸಿ ಸೆಪ್ಟೆಂಬರ್‌ನಿಂದ ಆರಂಭವಾಗುವ ಶಾಲೆಗಳಿಗೆ ಕಳುಹಿಸಲು ಸಜ್ಜುಗೊಳಿಸುವಂತೆಪ್ರಧಾನಿ ಬೋರಿಸ್ ಜಾನ್ಸನ್ ಅವರು ಪೋಷಕರಿಗೆ ಕರೆ ನೀಡಿದ್ದಾರೆ.

ಕೋವಿಡ್‌ನಿಂದಾಗುವ ಅಪಾಯಕ್ಕಿಂತ, ಶಾಲೆಗಳನ್ನು ಮುಚ್ಚಿರುವುದರಿಂದ ಮಕ್ಕಳ ಮೇಲಾಗುವ ಪರಿಣಾಮಗಳು ಎಷ್ಟು ಅಪಾಯಕಾರಿ ಎಂಬುದರ ಕುರಿತು ಬ್ರಿಟನ್‌ನ ಉನ್ನತಮಟ್ಟ ವೈದ್ಯಕೀಯ ಸಲಹೆಗಾರರು ನೀಡಿದ ಜಂಟಿ ಹೇಳಿಕೆಯನಂತರ ಪ್ರಧಾನಿಯವರು ಭಾನುವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದಾರೆ.

ಶಾಲೆಯನ್ನು ಪುನರಾರಂಭಿಸುವುದು ಸರ್ಕಾರದ ನೈತಿಕ ಕರ್ತವ್ಯ ಎಂದಿರುವ ಜಾನ್ಸನ್‌, ’ಮಕ್ಕಳು ಪುನಃ ಶಾಲೆಗೆ ಮರಳಬೇಕು. ತರಗತಿಯಲ್ಲಿ ಕುಳಿತು ಪಾಠ ಕೇಳಬೇಕು. ತಮ್ಮ ಸ್ನೇಹಿತರೊಂದಿಗೆ ಬೆರೆಯುವುದು ಬಹಳ ಮುಖ್ಯವಾದದು’ ಎಂದು ಸ್ಪಷ್ಟಪಡಿಸಿದ್ದಾರೆ.

ಕೊರೊನಾ ಸೋಂಕಿನ ಭೀತಿಯಿಂದಾಗಿ ಶಾಲೆಗಳಲ್ಲಿ ಮಕ್ಕಳು ಅಂತರ ಕಾಪಾಡುವುದಿಲ್ಲ ಎಂದು ಶಾಲೆ ಪುನರರಾರಂಭದ ಬಗ್ಗೆ ಪೋಷಕರು ಮತ್ತು ಶಿಕ್ಷಕರು ಕಳವಳ ವ್ಯಕ್ತಪಡಿಸಿದ್ದಾರೆ. ಶಾಲೆ ಪುನರರಾಂಭಕ್ಕೆ ಮುನ್ನ ಶಾಲೆಗಳಲ್ಲಿ ಕೈಗೊಳ್ಳುವ ಸುರಕ್ಷತಾ ಕ್ರಮಗಳ ಬಗ್ಗೆ ಸ್ಪಷ್ಟಪಡಿಸಬೇಕೆಂದು ಶೈಕ್ಷಣಿಕ ಸಂಘಟನೆಗಳು ಜಾನ್ಸನ್‌ ಸರ್ಕರವನ್ನು ಒತ್ತಾಯಿಸಿವೆ.

ಮಾರ್ಚ್‌ 23ರಂದು ಲಾಕ್‌ಡೌನ್‌ ಘೋಷಣೆಯಾದಾಗಿನಿಂದ ಬ್ರಿಟನ್‌ನಾದ್ಯಂತ ಶಾಲೆಗಳನ್ನು ಬಂದ್‌ ಮಾಡಲಾಗಿತ್ತು. ನಂತರ ಜೂನ್‌ನಲ್ಲಿ ಕೆಲವು ಕಡೆ ಶಾಲೆಗಳನ್ನು ಪುನರರಾಂಭಿಸಿದರೂ, ಸರ್ಕಾರ ಶಾಲೆಗೆ ಬರುವುದನ್ನು ಕಡ್ಡಾಯಗೊಳಿಸಿರಲಿಲ್ಲ. ಹೀಗಾಗಿ ಶೇ 18ರಷ್ಟು ಮಕ್ಕಳು ಮಾತ್ರ ಶಾಲೆಗೆ ಬರುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT