ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್ ಪೂರ್ವ ಭಾಗ ಅತಿಕ್ರಮಣಕ್ಕೆ ರಷ್ಯಾ ಯತ್ನ: ಬ್ರಿಟನ್ ಗುಪ್ತಚರ ವರದಿ ಉಲ್ಲೇಖ

1960ರ ಅವಧಿಯ ಕ್ಷಿಪಣಿ ದಾಳಿಗೆ ರಷ್ಯಾ ಸಿದ್ಧತೆ
Last Updated 11 ಜೂನ್ 2022, 19:32 IST
ಅಕ್ಷರ ಗಾತ್ರ

ಕೀವ್: ಕಲ್ಲಿದ್ದಲು ಗಣಿಗಳು ಮತ್ತು ಕೈಗಾರಿಕೆ ಪ್ರದೇಶಗಳಿರುವ ಉಕ್ರೇನ್ ಪೂರ್ವ ಭಾಗವನ್ನು ವಶಕ್ಕೆ ಪಡೆಯಲು ಯತ್ನಿಸುತ್ತಿರುವ ರಷ್ಯಾ, 1960ರ ಅವಧಿಯ, ಅಧಿಕ ಸಾಮರ್ಥ್ಯದ ಕ್ಷಿಪಣಿ ಪ್ರಯೋಗಿಸಲು ಸಿದ್ಧತೆ ನಡೆಸಿದೆ ಎಂದು ಬ್ರಿಟನ್‌ನ ಗುಪ್ತದಳದ ವರದಿಯು ಎಚ್ಚರಿಸಿದೆ.

ಸಾಂಪ್ರದಾಯಿಕ ಸಿಡಿತಲೆ ಒಳಗೊಂಡು ಪ್ರಯೋಗಿಸಿದಲ್ಲಿ 5.5 ಟನ್‌ ತೂಕದ ಕೆಎಚ್‌ –22 ಕ್ಷಿಪಣಿಗಳು ಹೆಚ್ಚಿನ ಪ್ರಮಾಣದಲ್ಲಿ ಹಾನಿ ಉಂಟುಮಾಡಬಲ್ಲವು. ರಷ್ಯಾದಲ್ಲಿ ಈಗ ಆಧುನಿಕ ಶಸ್ತ್ರಾಸ್ತ್ರಗಳ ಕೊರತೆ ಎದುರಾಗಿದೆ. ಈಗಾಗಿ, ಹಡಗು ನಿಗ್ರಹ ಕ್ಷಿಪಣಿಯನ್ನು ಪ್ರಯೋಗಿಸಲು ಸಿದ್ಧತೆ ನಡೆಸಿದೆ ಎಂದು ವರದಿ ಹೇಳಿದೆ.

2014ರಿಂದಲೂ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳ ಹಿಡಿತದಲ್ಲಿರುವ ಪೂರ್ವ ಭಾಗವನ್ನು ಸ್ವಾಧೀನ ಪಡೆಯಲು ಈಗ ರಷ್ಯಾ ಗಮನ ಕೇಂದ್ರೀಕರಿಸಿದೆ. ರಷ್ಯಾ ಮತ್ತು ಉಕ್ರೇನ್ ಸೇನೆಯ ತೀವ್ರ ಹೋರಾಟದ ಪರಿಣಾಮ ನಾಗರಿಕರು ಈಗ ಪ್ರದೇಶಗಳಿಂದ ಗುಳೆ ಹೋಗುತ್ತಿದ್ದಾರೆ.

ನಮ್ಮ ಮಾತು ಆಲಿಸಲಿಲ್ಲ: ಅಮೆರಿಕ
ಲಾಸ್ ಏಂಜೆಲೀಸ್ ವರದಿ:
ರಷ್ಯಾವು ಉಕ್ರೇನ್‌ಗೆ ಒಳನುಸುಳಲು ಸಿದ್ಧತೆ ನಡೆಸಿದೆ ಎಂಬ ಮಾಹಿತಿಯನ್ನು ಗುಪ್ತದಳ ಕ್ರೋಡಿಕರಿಸಿತ್ತು. ಆದರೆ, ಇದನ್ನು ನಂಬಲು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಸಿದ್ಧರಿರಲಿಲ್ಲ ಎಂದುಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

‘ರಷ್ಯಾ ಮತ್ತು ಉಕ್ರೇನ್ ನಡುವೆ 4 ತಿಂಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ಉಕ್ರೇನ್ ಪರ ಅಮೆರಿಕ ನಿಂತಿದೆ. ‘2ನೇ ಮಹಾಯುದ್ಧದ ಬಳಿಕ ಇಂಥ ಬೆಳವಣಿಗೆ ಆಗಿರಲಿಲ್ಲ. ವ್ಲಾಡಿಮಿರ್ ಪುಟಿನ್ ದಾಳಿ ನಡೆಸಬಹುದು ಎಂಬ ಮಾಹಿತಿ ನಿಚ್ಚಳವಾಗಿತ್ತು. ಅದರಲ್ಲಿ ಅನುಮಾನವೇ ಇರಲಿಲ್ಲ. ಆದರೆ, ಝೆಲೆನ್‌ಸ್ಕಿ ಇದನ್ನು ಕೇಳಲು ಸಿದ್ಧರಿರಲಿಲ್ಲ’ ಎಂದರು.

ನಿರ್ಬಂಧದಿಂದ ಹೆಚ್ಚು ಹಾನಿ ಇಲ್ಲ: ರಷ್ಯಾ
ಮಾಸ್ಕೊ:
ಉಕ್ರೇನ್ ಮೇಲಿನ ಯುದ್ಧ ಸಾರಿದ್ದಕ್ಕೆ ಪ್ರತಿಯಾಗಿ ಪಾಶ್ಚಿಮಾತ್ಯ ದೇಶಗಳು ಹೇರಿರುವ ನಿರ್ಬಂಧದಿಂದ ಆಗಿರುವ ಪರಿಣಾಮಗಳನ್ನು ಈಗ ಅಂದಾಜಿಸಲಾಗದು ಎಂದು ರಷ್ಯಾದ ಕೇಂದ್ರೀಯ ಬ್ಯಾಂಕ್ ಮುಖ್ಯಸ್ಥರು ತಿಳಿಸಿದ್ದಾರೆ.

ಈವರೆಗೆ, ನಾವು ಆತಂಕಪಟ್ಟಿದ್ದಕ್ಕಿಂತಲೂ ಪರಿಣಾಮ ಕಡಿಮೆ ಇದೆ. ಇದು, ದೇಶದ ಕಂಪನಿಗಳ ಸಾಮರ್ಥ್ಯವನ್ನು ಬಿಂಬಿಸಲಿದೆ. ಆದರೆ, ಪೂರ್ಣ ಪರಿಣಾಮ ಅಂದಾಜುಮಾಡಲು ಈಗ ಕಾಲ ಪಕ್ವವಲ್ಲ’ ಎಂದು ಎಲ್ವಿರಾ ನೆಬಿಯುಲ್ಲಿನಾ ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT