ಬುಧವಾರ, ಮೇ 25, 2022
22 °C

ರಿಷಿ ಸುನಕ್‌ ಆಸ್ತಿ ಘೋಷಣೆಯ ಪರಿಶೀಲನೆಗೆ ಬ್ರಿಟನ್‌ ಪ್ರಧಾನಿ ಒಪ್ಪಿಗೆ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಲಂಡನ್‌: ಬ್ರಿಟನ್‌ ಹಣಕಾಸು ಸಚಿವ ರಿಷಿ ಸುನಕ್‌ ಅವರ ಕುಟುಂಬದ ಆಸ್ತಿ ಮತ್ತು ಹಣಕಾಸಿಗೆ ಸಂಬಂಧಿಸಿದಂತೆ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ, ತಮ್ಮಿಂದ ಆಸ್ತಿ ಘೋಷಣೆ ನಿಯಮಗಳ ಉಲ್ಲಂಘನೆಯಾಗಿದೆಯೇ, ಇಲ್ಲವೋ ಎಂಬುದನ್ನು ನಿರ್ಧರಿಸಲು ಆಸ್ತಿ ಘೋಷಣೆಯನ್ನು ಪರಿಶೀಲಿಸಬೇಕೆಂದು ರಿಷಿ ಅವರ ಮನವಿಗೆ ಪ್ರಧಾನಿ ಬೋರಿಸ್‌ ಜಾನ್ಸನ್‌ ಸಮ್ಮತಿಸಿದ್ದಾರೆ ಎಂದು ಪ್ರಧಾನಿಯ ವಕ್ತಾರರು ತಿಳಿಸಿದ್ದಾರೆ.

ಈ ಬಗ್ಗೆ ಸುನಕ್‌ ಅವರು ಭಾನುವಾರ ಪ್ರಧಾನಿ ಜಾನ್ಸನ್‌ ಅವರಿಗೆ ಪತ್ರ ಬರೆದಿದ್ದರು. ಚಾನ್ಸಲರ್‌ ಮೂಲಕ ಬಂದ ಮನವಿಯನ್ನು ಪ್ರಧಾನಿ ಒಪ್ಪಿದ್ದಾರೆ. ಜಾನ್ಸನ್‌ ಅವರು ರಿಷಿ ಬಗ್ಗೆ ವಿಶ್ವಾಸ ಹೊಂದಿದ್ದಾರೆ ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು