ಬ್ರಿಟನ್: ಸಂಪುಟ ಸಚಿವನನ್ನು ವಜಾಗೊಳಿಸಿದ ರಿಷಿ ಸುನಕ್

ಲಂಡನ್ : ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಭಾನುವಾರ ತಮ್ಮ ಸಂಪುಟದ ಖಾತೆ ರಹಿತ ಸಚಿವ, ಬ್ರಿಟನ್ ಆಡಳಿತಾರೂಢ ಪಕ್ಷ ಕನ್‌ಸರ್ವೇಟಿವ್ ಪಾರ್ಟಿಯ ಮುಖ್ಯಸ್ಥ ನದೀಮ್ ಝಹಾವಿ ಅವರನ್ನು ಹುದ್ದೆಯಿಂದ ವಜಾಗೊಳಿಸಿದ್ದಾರೆ.
ನದೀಮ್ ಅವರು ತೆರಿಗೆ ಪಾವತಿಯಲ್ಲಿ ಪ್ರಮಾದ ಎಸಗಿದ್ದ ಆರೋಪ ಹೊಂದಿದ್ದರು. ಹೀಗಾಗಿ ಅವರನ್ನು ಹುದ್ದೆಯಿಂದ ವಜಾಗೊಳಿಸುವಂತೆ ಇತ್ತೀಚಿನ ದಿನಗಳಲ್ಲಿ ವಿರೋಧ ಪಕ್ಷದ ಸದಸ್ಯರು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದರು.
ನದೀಮ್ ಅವರನ್ನು ಹುದ್ದೆಯಿಂದ ವಜಾಗೊಳಿಸಿ, ಅವರನ್ನು ಉದ್ದೇಶಿಸಿ ಸುನಕ್ ಬರೆದಿರುವ ಅಧಿಕೃತ ಪತ್ರವನ್ನು ಬ್ರಿಟನ್ ಪ್ರಧಾನಿ ಕಚೇರಿ (ಡೌನಿಂಗ್ ಸ್ಟ್ರೀಟ್) ಬಿಡುಗಡೆ ಮಾಡಿದೆ. ‘ಕಳೆದ ವರ್ಷ ನಾನು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವ ವೇಳೆ, ಸರ್ಕಾರವನ್ನು ಎಲ್ಲಾ ಹಂತದಲ್ಲೂ ಪ್ರಾಮಾಣಿಕತೆ, ಕರ್ತವ್ಯಪ್ರಜ್ಞೆ ಮತ್ತು ಹೊಣೆಗಾರಿಕೆಯಿಂದ ಮುನ್ನಡೆಸುವುದಾಗಿ ಶಪಥ ತೆಗೆದುಕೊಂಡಿದ್ದೆ’ ಎಂದು ಸುನಕ್ ಪತ್ರದಲ್ಲಿ ಬರೆದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.