ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌: ಮುಂದಿನ ವಾರದಿಂದ ಎಲ್ಲಾ ಕೋವಿಡ್‌ ನಿರ್ಬಂಧ ತೆರವು

Last Updated 20 ಫೆಬ್ರುವರಿ 2022, 12:31 IST
ಅಕ್ಷರ ಗಾತ್ರ

ಲಂಡನ್‌: ‘ಕೋವಿಡ್‌ ಜೊತೆಗೆ ವಾಸ’ ಇದು ಇಂಗ್ಲೆಂಡ್‌ ಸರ್ಕಾರ ರೂಪಿಸಿರುವ ಹೊಸ ಯೋಜನೆ. ಇದರ ಅನ್ವಯ ಸರ್ಕಾರ ವಿಧಿಸಿರುವ ಕೋವಿಡ್‌ ನಿರ್ಬಂಧಗಳನ್ನು ತೆರವುಗೊಳಿಸಲು ತೀರ್ಮಾನಿಸಲಾಗಿದೆ. ಕೋವಿಡ್‌ ಪಿಡುಗಿಗೆ ತುತ್ತಾದವರು ಮುಂದಿನ ವಾರದಿಂದ ಪ್ರತ್ಯೇಕ ಉಳಿಯುವ ಅಗತ್ಯವಿಲ್ಲ ಎಂದು ಸರ್ಕಾರ ಶನಿವಾರ ಸ್ಪಷ್ಟಪಡಿಸಿದೆ.

ಹೊಸ ಯೋಜನೆಯಿಂದ ಕೋವಿಡ್‌ ಪರೀಕ್ಷೆಗಳ ಸಂಖ್ಯೆಯಲ್ಲಿ ಇಳಿಮುಖವಾಗಬಹುದು ಎನ್ನಲಾಗಿದೆ.

‘ನಿರ್ಬಂಧಗಳ ಮೂಲಕ ನಮ್ಮ ಸ್ವಾತಂತ್ರ್ಯ ಹತ್ತಿಕ್ಕಬೇಡಿ’ ಎಂದು ನಗರದಾದ್ಯಂತ ನಡೆದ ಪ್ರತಿಭಟನೆಗೆ ಪ್ರಧಾನಿ ಬೋರಿಸ್‌ ಜಾನ್ಸನ್‌ ಮಣಿದಿದ್ದಾರೆ.

ಇಂಗ್ಲೆಂಡ್‌ನಲ್ಲಿ ಜನವರಿಯಲ್ಲಿ ಜಾನ್ಸನ್‌ ಆಡಳಿತ ಬಹುತೇಕ ಕೋವಿಡ್‌ ನಿರ್ಬಂಧಗಳನ್ನು ತೆಗೆದುಹಾಕಿತ್ತು. ಸಾರ್ವಜನಿಕ ಪ್ರದೇಶಗಳಲ್ಲಿ ಲಸಿಕೆ ಪ್ರಮಾಣಪತ್ರ ರದ್ದುಗೊಳಿಸಿತ್ತು. ಆಸ್ಪತ್ರೆಗಳನ್ನು ಹೊರತುಪಡಿಸಿ ಉಳಿದೆಡೆ ಕಡ್ಡಾಯ ಮಾಸ್ಕ್‌ ಆದೇಶ ಹಿಂಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT