ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15 ನಾಗರಿಕ ಸಾವು; 20ಕ್ಕೂ ಹೆಚ್ಚು ಮಂದಿಗೆ ಗಾಯ

ಉಕ್ರೇನ್‌ ಮೇಲೆ ಎರಗಿದ ರಷ್ಯಾದ ಉರಗನ್‌ ಕ್ಷಿಪಣಿ
Last Updated 10 ಜುಲೈ 2022, 17:47 IST
ಅಕ್ಷರ ಗಾತ್ರ

ಕೀವ್‌:ಉಕ್ರೇನ್‌ ಪೂರ್ವದ ಡೊನೆಟ್‌ಸ್ಕ್‌ ಪ್ರದೇಶದ ಚೆಸಿವ್‌ ಯಾರ್‌ ನಗರದ ಜನವಸತಿ ಪ್ರದೇಶದ ಅಪಾರ್ಟ್‌ಮೆಂಟ್‌ ಕಟ್ಟಡದ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದ್ದು, 15 ನಾಗರಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಕಟ್ಟಡ ಬಹುತೇಕ ಧ್ವಂಸಗೊಂಡಿದ್ದು, 20ಕ್ಕೂ ಹೆಚ್ಚು ನಾಗರಿಕರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ. ಶನಿವಾರ ತಡ ರಾತ್ರಿ ರಷ್ಯಾ ಟ್ರಕ್‌ ಮೂಲಕ ಹಾರಿಸಿದ ಉರಗನ್‌ ಕ್ಷಿಪಣಿ ಅಪ್ಪಳಿ, ಭಾರಿ ಸಾವು–ನೋವು ಸಂಭವಿಸಿದೆ. ಹಾರ್ಕಿವ್‌ ಮತ್ತು ಮೈಕೋಲೈವ್‌ ನಗರಗಳ ಮೇಲೂ ಶೆಲ್‌ ದಾಳಿ ಮುಂದುವರಿದಿದ್ದು, 18 ಜನರು ಗಾಯಗೊಂಡು, ಒಬ್ಬ ನಾಗರಿಕ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ದಾಳಿ ಬಗ್ಗೆ ರಷ್ಯಾ ರಕ್ಷಣಾ ಸಚಿವಾಲಯ ಪ್ರತಿಕ್ರಿಯಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT