ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾದ 5,000 ಕ್ಕೂ ಅಧಿಕ ಸೈನಿಕರನ್ನು ಕೊಂದಿರುವುದಾಗಿ ಹೇಳಿಕೊಂಡ ಉಕ್ರೇನ್

Last Updated 28 ಫೆಬ್ರುವರಿ 2022, 12:17 IST
ಅಕ್ಷರ ಗಾತ್ರ

ಕೀವ್: ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮುಂದುವರಿದಿದ್ದು, ಯುದ್ಧ ಆರಂಭವಾದ ಮೊದಲ ನಾಲ್ಕು ದಿನಗಳಲ್ಲಿ ರಷ್ಯಾದ 5,500 ಸೈನಿಕರನ್ನು ಹತ್ಯೆ ಮಾಡಿರುವುದಾಗಿ ಉಕ್ರೇನ್ ರಕ್ಷಣಾ ಸಚಿವಾಲಯ ಮಾಹಿತಿ ನೀಡಿರುವುದಾಗಿ ಬಿಬಿಸಿ ವರದಿ ಮಾಡಿದೆ.

ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಉಕ್ರೇನ್ ಅಧಿಕಾರಿಗಳು, 'ಅಂದಾಜು 5,300 ರಷ್ಯಾದ ಸೈನಿಕರನ್ನು ಹತ್ಯೆ ಮಾಡಲಾಗಿದೆ ಮತ್ತು ರಷ್ಯಾದ 191 ಟ್ಯಾಂಕ್‌ಗಳು, 29 ಫೈಟರ್ ವಿಮಾನಗಳು, 29 ಹೆಲಿಕಾಪ್ಟರ್‌ಗಳು ಮತ್ತು 816 ಶಸ್ತ್ರಸಜ್ಜಿತ ಸಿಬ್ಬಂದಿ ವಾಹನಗಳನ್ನು ಉಕ್ರೇನ್ ಪಡೆಗಳು ನಾಶ ಮಾಡಿವೆ' ಎಂದು ತಿಳಿಸಿದ್ದಾರೆ.

ಸಂಘರ್ಷದ ಆರಂಭದಲ್ಲಿ ರಷ್ಯಾ ಭಾರಿ ಸಾವುನೋವುಗಳನ್ನು ಕಂಡಿದೆ ಎಂದು ಇಂಗ್ಲೆಂಡ್ ರಕ್ಷಣಾ ಸಚಿವಾಲಯವು ನಂಬಿದ್ದರೂ ಕೂಡ, ಈ ಕುರಿತು ಬಿಬಿಸಿ ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ.

'ಸಾವುನೋವುಗಳ ಕುರಿತು ಅಧಿಕಾರಿಗಳು ನಿಖರವಾದ ಅಂಕಿಅಂಶವನ್ನು ನೀಡದಿದ್ದರೂ ಕೂಡ, ತನ್ನ ಪಡೆಗಳು ನಷ್ಟವನ್ನು ಅನುಭವಿಸಿವೆ ಎಂದು ರಷ್ಯಾದ ರಕ್ಷಣಾ ಸಚಿವಾಲಯವು ಭಾನುವಾರದಂದು ಒಪ್ಪಿಕೊಂಡಿರುವುದು ಇದಕ್ಕೆ ಪುಷ್ಟಿ ನೀಡುತ್ತದೆ' ಎಂದು ಬಿಬಿಸಿ ವರದಿ ಮಾಡಿದೆ.

ಈ ಮಧ್ಯೆ, ರಷ್ಯಾದ ಆಕ್ರಮಣ ಆರಂಭವಾದ ಮೊಲದ ನಾಲ್ಕು ದಿನಗಳಲ್ಲಿ ಉಕ್ರೇನ್‌ನ 94 ನಾಗರಿಕರು ಮೃತಪಟ್ಟು, 354 ಜನ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮೇಲ್ವಿಚಾರಣಾ ತಂಡ ಸೋಮವಾರ ಖಚಿತಪಡಿಸಿದೆ.

ರಷ್ಯಾದ ದಾಳಿಯು ಉಕ್ರೇನ್‌ನಲ್ಲಿ ಮಾನವೀಯತೆಯ ಬಹುದೊಡ್ಡ ಬಿಕ್ಕಟ್ಟನ್ನು ಉಂಟುಮಾಡಲಿದೆ. ನಾಗರಿಕರಿಗೆ ಸಂಬಂಧಿಸಿದ ಸಾವುನೋವುಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT