ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌: ಮತ್ತೊಂದು ಸಮೂಹ ಸಮಾಧಿ ಪತ್ತೆ

Last Updated 16 ಸೆಪ್ಟೆಂಬರ್ 2022, 14:31 IST
ಅಕ್ಷರ ಗಾತ್ರ

ಇಝಿಯುಮ್‌(ಉಕ್ರೇನ್‌): ರಷ್ಯಾ ಪಡೆಗಳ ಹಿಡಿತದಿಂದ ಮರು ವಶಪಡಿಸಿಕೊಂಡಿರುವ ಅರಣ್ಯ ಪ್ರದೇಶದಲ್ಲಿ ಸಮೂಹ ಸಮಾಧಿಗಳು ಪತ್ತೆಯಾಗಿದ್ದು, ಶವಗಳನ್ನು ಹೊರತೆಗೆಯುವ ಕಾರ್ಯಕ್ಕೆ ಉಕ್ರೇನ್‌ ಸರ್ಕಾರ ಚಾಲನೆ ನೀಡಿದೆ.

ಉಕ್ರೇನ್ ಪಡೆಗಳು ಕ್ಷಿಪ್ರ ಪ್ರತಿದಾಳಿ ನಡೆಸಿ, ಈಶಾನ್ಯ ನಗರ ಮತ್ತು ಹಾರ್ಕಿವ್ ಪ್ರದೇಶದ ಇತರ ಪ್ರದೇಶಗಳನ್ನು ರಷ್ಯಾ ಹಿಡಿತದಿಂದ ವಿಮೋಚನೆಗೊಳಿಸಿದ ನಂತರ ಇಝಿಯುಮ್‌ಗೆ ಸಮೀಪದಲ್ಲಿನೂರಾರು ಸಮಾಧಿಗಳು ಕಂಡುಬಂದಿವೆ.

ಗುರುವಾರ ಮಾಧ್ಯಮ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿದಾಗ,ಮರಗಳ ಗುಂಪಿನ ನಡುವೆ ನೂರಾರು ಸಮಾಧಿಗಳಿರುವುದನ್ನು ಕಂಡಿದ್ದಾರೆ. ಮರದ ಶಿಲುಬೆಗಳಿಂದ ಗುರುತಿಸಿರುವ ಸಮಾಧಿಗಳು400ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವುದು ಪತ್ತೆಯಾಗಿದೆ.ಒಂದು ಸಮೂಹ ಸಮಾಧಿಯಲ್ಲಿಕನಿಷ್ಠ 17 ಮಂದಿ ಉಕ್ರೇನ್‌ ಸೈನಿಕರ ಶವಗಳಿರುವುದನ್ನು ಮರದ ಶಿಲುಬೆಗಳ ಗುರುತು ಸೂಚಿಸುತ್ತದೆ. ಈ ಸೈನಿಕರನ್ನು ಚಿತ್ರಹಿಂಸೆ ನೀಡಿ ಕೊಲ್ಲಲಾಗಿದೆ ಎನ್ನಲಾಗಿದೆ.

ಆಕ್ರಮಣದ ವೇಳೆ ರಷ್ಯಾ ಎಂತಹ ಕೃತ್ಯ ನಡೆಸಿದೆ ಎನ್ನುವುದನ್ನು ಜಗತ್ತಿನ ಮುಂದೆ ಅನಾವರಣಗೊಳಿಸಲು ಇದು ನೆರವಾಗಲಿದೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದಾರೆ.

ಬುಕಾ, ಮರಿಯುಪೊಲ್‌ನಲ್ಲಿ ಸಾಮೂಹಿಕ ಮಾರಣಹೋಮ ನಡೆದಿರುವುದು ಪತ್ತೆಯಾಗಿತ್ತು. ಈಗ ದುರದೃಷ್ಟವಶಾತ್‌ ಇಝಿಯುಮ್‌ನಲ್ಲೂ ಪತ್ತೆಯಾಗಿದೆ.ಉಕ್ರೇನ್‌ ನೆಲದ ಎಲ್ಲೆಡೆ ಮಾರಣಹೋಮ ನಡೆಸಿರುವ ರಷ್ಯಾ ಇದಕ್ಕೆ ತಕ್ಕ ಬೆಲೆ ತೆರಲೇಬೇಕು ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ.

ರಷ್ಯಾ ನಗರದಲ್ಲಿ ಅವಳಿ ಸ್ಫೋಟ: ರಷ್ಯಾದ ಬೆಲ್ಗೊರೊಡ್ ಪ್ರಾಂತ್ಯದ ವಾಲುಯ್ಕಿ ನಗರದಲ್ಲಿ ಬಾಂಬ್‌ಗಳ ಪ್ರಬಲ ಸ್ಫೋಟ ಸಂಭವಿಸಿದ್ದು, ಒಬ್ಬ ನಾಗರಿಕ ಮೃತಪಟ್ಟು, ಮತ್ತಿಬ್ಬರು ಗಾಯಗೊಂಡಿರುವುದಾಗಿಬೆಲ್ಗೊರೊಡ್ ಪ್ರಾಂತ್ಯದ ಆಡಳಿತ ಮುಖ್ಯಸ್ಥ ವೆಚೆಸ್ಲಾವ್‌ ಗ್ಲಾಡ್ಕಾವ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT