ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ವಸ್ತ್ರ ದಾಳಿ ನಡೆಸಿದರೆ ಪುಟಿನ್ ಬದುಕುಳಿಯುವುದಿಲ್ಲ: ಝೆಲೆನ್‌ಸ್ಕಿ

Last Updated 6 ಅಕ್ಟೋಬರ್ 2022, 13:54 IST
ಅಕ್ಷರ ಗಾತ್ರ

ಕ್ಯಾನ್ ಬೆರಾ: ‘ಒಂದು ವೇಳೆ ಅಣ್ವಸ್ತ್ರ ದಾಳಿ ನಡೆಸಿದ್ದೇ ಆದಲ್ಲಿ, ಜಗತ್ತು ಎಂದಿಗೂ ತನ್ನನ್ನು ಕ್ಷಮಿಸುವುದಿಲ್ಲ ಎಂಬುದು ಪುಟಿನ್‌ಗೆ ಮನದಟ್ಟಾಗಿದೆ. ಅಲ್ಲದೇ,ಅಣ್ವಸ್ತ್ರ ದಾಳಿ ನಡೆದಲ್ಲಿ, ಪುಟಿನ್‌ ಬದುಕುಳಿಯುವುದಿಲ್ಲ’ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದಾರೆ.

ಸಿಡ್ನಿಯಲ್ಲಿರುವ ಲೋವಿ ಇನ್‌ಸ್ಟಿಟ್ಯೂಟ್ ಇಂಟರ್‌ನ್ಯಾಷನಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಗುರುವಾರ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡಿದರು.

‘ರಷ್ಯಾದ ಹಿಡಿತದಿಂದ ತನ್ನ ಪ್ರದೇಶಗಳನ್ನು ಮರುವಶಪಡಿಸಿಕೊಂಡಿರುವ ಕಾರಣಕ್ಕೆ ಉಕ್ರೇನ್‌ ಮೇಲೆ ಅಣ್ವಸ್ತ್ರ ದಾಳಿಯ ಅಪಾಯ ಹೆಚ್ಚಾಗಿದೆ ಎಂದು ಹೇಳುವುದು ಕಷ್ಟ. ಆದರೆ, ಅಂಥ ದಾಳಿ ನಡೆದಿದ್ದೇ ಆದಲ್ಲಿ, ತನ್ನ ಪ್ರಾಣ ಸೇರಿದಂತೆ ಏನನ್ನೂ ಉಳಿಸಿಕೊಳ್ಳಲು ಪುಟಿನ್‌ಗೆ ಸಾಧ್ಯವಾಗುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಷ್ಯಾ ಆಕ್ರಮಿತ ಪ್ರದೇಶಗಳ ಮೇಲೆ ಹಿಡಿತ ಸಾಧಿಸುವ ಉಕ್ರೇನ್‌ ಪ್ರಯತ್ನವನ್ನು ತಡೆಯಲು ಅಣ್ವಸ್ತ್ರ ಬಳಸಲು ತಾನು ಹಿಂಜರಿಯುವುದಿಲ್ಲ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇತ್ತೀಚೆಗೆ ಎಚ್ಚರಿಸಿದ್ದರು.

ರಷ್ಯಾದಿಂದ ರಾಕೆಟ್‌ ದಾಳಿ: ಒಬ್ಬ ಸಾವು

ಕೀವ್: ದಕ್ಷಿಣ ಉಕ್ರೇನ್‌ ನಗರ ಝಪೋರಿಜಜಿಯಾದ ಜನವಸತಿ ಪ್ರದೇಶಗಳ ಮೇಲೆ ರಷ್ಯಾ ಪಡೆಗಳು ಗುರುವಾರ ಏಳು ರಾಕೆಟ್‌ಗಳಿಂದ ದಾಳಿ ನಡೆಸಿವೆ. ಈ ಘಟನೆಯಲ್ಲಿ ಒಬ್ಬ ಮೃತಪಟ್ಟಿದ್ದು, ಏಳು ಜನರು ಕಟ್ಟಡಗಳ ಅವಶೇಷಗಳಡಿ ಸಿಲುಕಿದ್ದಾರೆ ಎಂದು ಮೂಲಗಳು ಹೇಳಿವೆ.

‘ರಷ್ಯಾದ ಹಿಡಿತದಿಂದ ಮತ್ತೆ ಮೂರು ಗ್ರಾಮಗಳನ್ನು ಮರುವಶಪಡಿಸಿಕೊಳ್ಳಲಾಗಿದೆ’ ಎಂಬುದಾಗಿ ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಅವರು ಘೋಷಿಸಿದ ಕೆಲವೇ ಗಂಟೆಗಳ ನಂತರ ರಷ್ಯಾ ರಾಕೆಟ್‌ಗಳಿಂದ ದಾಳಿ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT