ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್ ಬಿಕ್ಕಟ್ಟು: ಐರ್ಲೆಂಡ್ ಕರಾವಳಿ ಸಮೀಪ ನೌಕಾ ಸಮರಾಭ್ಯಾಸಕ್ಕೆ ರಷ್ಯಾ ಸಜ್ಜು

Last Updated 30 ಜನವರಿ 2022, 13:13 IST
ಅಕ್ಷರ ಗಾತ್ರ

ಮಾಸ್ಕೊ: ಉಕ್ರೇನ್ ಮೇಲೆ ಆಕ್ರಮಣ ಮಾಡಲು ರಷ್ಯಾ ತಯಾರಿ ನಡೆಸುತ್ತಿದೆ ಎಂದು ಆರೋಪ ಕೇಳಿ ಬಂದ ಬೆನ್ನಲ್ಲೇ ತಾನು ಐರ್ಲೆಂಡ್‌ ದೇಶದ ಕರಾವಳಿಗೆ ನೌಕಾ ಕಾರ್ಯಾಚರಣೆಯನ್ನು ಸ್ಥಳಾಂತರಿಸುವುದಾಗಿ ರಷ್ಯಾ ಹೇಳಿದೆ.

ನೈರುತ್ಯ ಐರ್ಲೆಂಡ್‌ನ 240 ಕಿ.ಮೀ. (150 ಮೈಲುಗಳು) ವರೆಗೆ ರಷ್ಯಾ ಫೆಬ್ರುವರಿ 3–8ರವೆಗೆ ನೌಕಾ ಕಾರ್ಯಾಚರಣೆ ನಡೆಯಲಿದೆ ಎನ್ನಲಾಗಿದೆ.

‘ಉಕ್ರೇನ್‌ನಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಸಂದರ್ಭದಲ್ಲಿ ಮಿಲಿಟರಿ ಕಾರ್ಯಾಚರಣೆಗೆ ಇದು ಸಮಯವಲ್ಲ. ಐರಿಶ್‌ ಕರಾವಳಿಯಲ್ಲಿ ನೌಕಾಭ್ಯಾಸ ಮಾಡುವ ರಷ್ಯಾ ಕ್ರಮ ಸ್ವಾಗತಾರ್ಹವಲ್ಲ’ ಎಂದು ಐರಿಶ್‌ ವಿದೇಶಾಂಗ ಸಚಿವ ಸೈಮನ್‌ ಕೊವೆನಿ ಹೇಳಿದ್ದಾರೆ. ಐರ್ಲೆಂಡ್‌ಸಹ ನ್ಯಾಟೊ ಮಿತ್ರ ರಾಷ್ಟ್ರವಾಗಿರುವುದರಿಂದ ರಷ್ಯಾದ ಈ ನಡೆ ಅಲ್ಲಿ ಆತಂಕ ಸೃಷ್ಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT