ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ನ ಗಣಿತ ತಜ್ಞೆಗೆ ಪ್ರತಿಷ್ಠಿತ ಫೀಲ್ಡ್ಸ್‌ ಪದಕ

Last Updated 5 ಜುಲೈ 2022, 11:08 IST
ಅಕ್ಷರ ಗಾತ್ರ

ಬರ್ಲಿನ್‌: ಉಕ್ರೇನಿನ ಗಣಿತ ತಜ್ಞೆ ಮರಿನಾ ವಯಾಜೋವ್‌ಸ್ಕಾ ಅವರು ಪ್ರತಿಷ್ಠಿತ ಫೀಲ್ಡ್ಸ್ ಪದಕ ಪಡೆದಿದ್ದಾರೆ. ಈ ಪ್ರಶಸ್ತಿಯನ್ನು ಗಣಿತಶಾಸ್ತ್ರದ ನೊಬೆಲ್ ಎಂದು ಪರಿಗಣಿಸಲಾಗುತ್ತದೆ.

ಲೌಸಾನೆಯಲ್ಲಿರುವ ಸ್ವಿಸ್ ಫೆಡರಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಂಖ್ಯಾ ಸಿದ್ಧಾಂತದ ವಿಭಾಗದ ಅಧ್ಯಕ್ಷರಾಗಿರುವ ವಯಾಜೋವ್‌ಸ್ಕಾ ಅವರು ಎಂಟು ಆಯಾಮಗಳಲ್ಲಿ ಒಂದೇ ರೀತಿಯ ಗೋಳಗಳ ಕುರಿತು ಮಾಡಿದ ಸಂಶೋಧನೆಗೆ ಈ ಪ‍್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದುಗಣಿತಶಾಸ್ತ್ರಜ್ಞರ ಅಂತರರಾಷ್ಟ್ರೀಯ ಕಾಂಗ್ರೆಸ್ ಮಂಗಳವಾರ ತಿಳಿಸಿದೆ.

ಜಿನೀವಾ ವಿಶ್ವವಿದ್ಯಾಲಯದ ಫ್ರೆಂಚ್‌ ಗಣಿತ ತಜ್ಞ ಹ್ಯೂಗೊ ಡುಮಿನಿಲ್–ಕೋಪಿನ್‌, ಪ್ರಿನ್ಸ್‌ಟನ್‌ನ ಕೊರಿಯಾ ಮೂಲದ ಅಮೆರಿಕದ ಗಣಿತ ತಜ್ಞ ಜೂನ್‌ ಹೂಹ್‌ ಮತ್ತು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಬ್ರಿಟಿಷ್ ಗಣಿತ ತಜ್ಞ ಜೇಮ್ಸ್‌ ಮೇನಾರ್ಡ್‌ ಅವರಿಗೂ ಈ ಪ್ರಶಸ್ತಿ ಲಭಿಸಿದೆ.

ಫೀಲ್ಡ್ಸ್ ಪದಕವನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ 40 ವರ್ಷದೊಳಗಿನ ಗಣಿತ ತಜ್ಞರಿಗೆ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT