ಬುಧವಾರ, ಸೆಪ್ಟೆಂಬರ್ 22, 2021
21 °C

ದೇಶದ ಪರ ಏಕೈಕ ಚಿನ್ನ ಗೆದ್ದ ಉಕ್ರೇನ್‌ ಕುಸ್ತಿಪಟುಗೆ ತವರಿನಲ್ಲೇ ಜನಾಂಗೀಯ ನಿಂದನೆ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಕೀವ್‌ (ಉಕ್ರೇನ್‌): ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಉಕ್ರೇನ್‌ ಪರ ಏಕೈಕ ಚಿನ್ನದ ಪದಕ ಗೆದ್ದ ಕುಸ್ತಿಪಟುವಿಗೆ ತವರಿನ ಬೀದಿಯಲ್ಲಿ ಜನಾಂಗೀಯ ನಿಂದನೆ ಮಾಡಲಾಗಿದೆ.

30 ವರ್ಷದ ಝಾನ್‌ ಬೆಲೆನ್ಯುಕ್ ಎರಡು ಬಾರಿಯ ವಿಶ್ವ ಕುಸ್ತಿ ಚಾಂಪಿಯನ್. 2019 ರಲ್ಲಿ ಅಧ್ಯಕ್ಷ ವ್ಲಾಡಿಮೀರ್‌ ಝೆಲೆನ್ಸ್‌ಕೀಸ್‌ ಅವರ ‘ಸರ್ವೆಂಟ್ ಆಫ್ ದಿ ಪೀಪಲ್ ಪಾರ್ಟಿ’ ಮೂಲಕ ಸಂಸತ್ತಿಗೆ ಪ್ರವೇಶಿಸಿದ್ದರು. ಈ ಮೂಲಕ ಅವರು ಉಕ್ರೇನ್‌ನ ಮೊದಲ ಕಪ್ಪು ವರ್ಣೀಯ ಸಂಸದ ಎಂಬ ಕಿರ್ತಿಗೆ ಪಾತ್ರರಾಗಿದ್ದರು.

ಕೆಲವು ಅಪರಿಚಿತ ಯುವಕರು ತಮ್ಮೊಂದಿಗೆ ಜಗಳ ತೆಗೆಯಲು ಪ್ರಯತ್ನಿಸಿದರು ಮತ್ತು ಜನಾಂಗೀಯ ನಿಂದನೆಯ ಘೋಷಣೆಗಳನ್ನು ಕೂಗಿದರು ಎಂದು ಬೆಲೆನ್ಯುಕ್ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದಾರೆ.

ಬೆಲೆನ್ಯೂಕ್‌ ಅವರ ತಾಯಿ ಉಕ್ರೇನಿನವರಾದರೆ, ತಂದೆ ರ್‍ವಾಂಡದವರು. ತಮಗೆ ಬಾಲ್ಯದಿಂದಲೂ ಜನಾಂಗೀಯ ನಿಂದನೆಗಳಾಗಿವೆ ಎಂದು ಬೆಲೆನ್ಯೂಕ್‌ ಅವರು ಹೇಳಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ ಕ್ರೀಡಾಕೂಟದ ಪುರುಷರ ಗ್ರೀಕೋ-ರೋಮನ್ 87 ಕೆಜಿ ಕುಸ್ತಿ ಸ್ಪರ್ಧೆಯಲ್ಲಿ ಬೆಲೆನ್ಯೂಕ್‌ ಚಿನ್ನದ ಪದಕ ಗೆದ್ದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು