ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ.16ರಂದು ರಷ್ಯಾದಿಂದ ಉಕ್ರೇನ್‌ ಮೇಲೆ ಆಕ್ರಮಣ: ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ

Last Updated 15 ಫೆಬ್ರುವರಿ 2022, 1:53 IST
ಅಕ್ಷರ ಗಾತ್ರ

ಕೈವ್‌ (ಉಕ್ರೇನ್‌):'ಫೆಬ್ರವರಿ 16, ಉಕ್ರೇನ್ ಮೇಲೆ ರಷ್ಯಾದಿಂದ ಆಕ್ರಮಣ ನಡೆಯುವ ದಿನ’ ಎಂದು ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್‌ಸ್ಕಿ ತಮ್ಮ ಫೇಸ್‌ಬುಕ್‌ನಲ್ಲಿ ಸೋಮವಾರ ಪ್ರಕಟಿಸಿದ್ದಾರೆ.

ಅಲ್ಲದೇ, ಈ ದಿನವನ್ನು ದೇಶದ ಒಗ್ಗಟ್ಟಿನ ದಿನವೆಂದು ಅವರು ಘೋಷಿಸಿದ್ದಾರೆ. ಜತೆಗೆ, ಈ ಸಂದರ್ಭದಲ್ಲಿ ದೇಶ ಒಟ್ಟಾಗಿರಬೇಕು ಎಂದು ಅವರು ದೇಶವನ್ನು ಉದ್ದೇಶಿಸಿ ಬರೆದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಡಾನ್ಬಾಸ್ ಮತ್ತು ಕ್ರಿಮಿಯಾವನ್ನು ಸುಪರ್ದಿಗೆ ಪಡೆಯುವುದಾಗಿಯೂ ಹೇಳಿರುವ ಅವರು,ಅದಕ್ಕಾಗಿ ರಾಜತಾಂತ್ರಿಕ ಮಾರ್ಗ ಅನುಸರಿಸುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಉಕ್ರೇನ್‌ ಮಿತ್ರ ರಾಷ್ಟ್ರ ಅಮೆರಿಕ, ‘ಆಕ್ರಮಣದ ನಿರ್ಧಾರವನ್ನು ರಷ್ಯಾ ಅಧ್ಯಕ್ಷ ಪುಟಿನ್‌ ಕೈಗೊಂಡಿದ್ದಾರೆ ಎಂದು ನಾವು ಈಗಲೂ ನಂಬುವುದಿಲ್ಲ. ಆದರೆ ಅವರು ಯಾವುದೇ ಮುನ್ಸೂಚನೆ ಇಲ್ಲದೇ ದಾಳಿ ನಡೆಸಲೂ ಬಹುದು’ ಎಂದಿದೆ.

ಉಕ್ರೇನ್‌ ಮೇಲೆ ದಾಳಿ ನಡೆಸುವುದಿಲ್ಲ ಎಂದು ರಷ್ಯಾ ಈ ವರೆಗೆ ಹೇಳುತ್ತಲೇ ಬಂದಿದೆ. ಉಕ್ರೇನ್‌ ಗಡಿಯಲ್ಲಿನ ಸೇನಾ ನಿಯೋಜನೆಯು ಮಿಲಿಟರಿ ತರಬೇತಿಗೆ ಮಾತ್ರ ಎಂದೂ ಅದು ಸ್ಪಷ್ಟಪಡಿಸಿದೆ.

ಉಕ್ರೇನ್‌ಗೆ ನ್ಯಾಟೊ ಬೆಂಬಲವನ್ನು ವಿರೋಧಿಸಿರುವ ರಷ್ಯಾ, ಗಡಿಯಲ್ಲಿ ಸೇನೆಯನ್ನು ನಿಯೋಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT