ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗತ್ತಿನಲ್ಲಿ ಮಾದಕ ಪದಾರ್ಥ ಸೇವಿಸುವವರ ಸಂಖ್ಯೆ 27.5 ಕೋಟಿ!

Last Updated 25 ಜೂನ್ 2021, 6:15 IST
ಅಕ್ಷರ ಗಾತ್ರ

ಬರ್ಲಿನ್‌: ಜಗತ್ತಿನಲ್ಲಿ ಕಳೆದ ವರ್ಷ 27.5 ಕೋಟಿ ಜನರು ಮಾದಕವಸ್ತುಗಳನ್ನು ಸೇವಿಸಿದ್ದಾರೆ ಎಂಬ ಭಯಾನಕ ಅಂಕಿ ಅಂಶ ಹೊರಬಿದ್ದಿದೆ.

ವಿಯೆನ್ನಾದಲ್ಲಿರುವ ವಿಶ್ವಸಂಸ್ಥೆಯ ಮಾದಕವಸ್ತು ಮತ್ತು ಅಪರಾಧ ವಿಭಾಗವು (ಯುಎನ್‌ಒಡಿಸಿ) ಈ ಅಂಕಿಅಂಶವನ್ನು ಬಿಡುಗಡೆ ಮಾಡಿದ್ದು, ಮಾದಕ ವಸ್ತುಗಳನ್ನು ಸೇವಿಸುತ್ತಿರುವವರ ಪೈಕಿ 3.6 ಕೋಟಿ ಜನರು ವಿವಿಧ ರೀತಿಯ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದೆ.

ಕೊರೊನಾ ಪಿಡುಗಿನ ಅವಧಿಯಲ್ಲಿ ಅನೇಕ ದೇಶಗಳಲ್ಲಿ ಗಾಂಜಾ ಬಳಕೆ ಹೆಚ್ಚಿರುವುದನ್ನು ಉಲ್ಲೇಖಿಸಲಾಗಿದೆ. ವೈದ್ಯಕೀಯ ಕ್ಷೇತ್ರದ ವೃತ್ತಿಪರರು ಮಾದಕ ವಸ್ತುಗಳ ಸೇವೆನೆ ಕುರಿತು 77 ದೇಶಗಳಲ್ಲಿ ಸಮೀಕ್ಷೆ ನಡೆಸಿದ್ದಾರೆ. ಈ ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇ 42ರಷ್ಟು ಮಂದಿ ಗಾಂಜಾ ಬಳಕೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ. ಇದೇ ಅವಧಿಯಲ್ಲಿ ವೈದ್ಯಕಿಯೇತರ ಉದ್ದೇಶಗಳಿಗಾಗಿ ಅವಧಿ ಮೀರಿದ ಔಷಧಗಳ ಬಳಕೆಯೂ ಹೆಚ್ಚಾಗಿರುವುದು ಕಂಡುಬಂದಿರುವುದಾಗಿ ವರದಿಯಲ್ಲಿ ಹೇಳಿದೆ.

ಕಳೆದ 24 ವರ್ಷಗಳಲ್ಲಿ ವಿಶ್ವದ ಕೆಲವು ಭಾಗಳಲ್ಲಿ ಗಾಂಜಾ ಬಳಕೆ ನಾಲ್ಕು ಪಟ್ಟು ಹೆಚ್ಚಾಗಿದೆ. ಇದು ಹಾನಿಕಾರಕ ಎಂದು ಗೊತ್ತಾದ ನಂತರ ಹದಿಹರೆಯದವರು ಗಾಂಜಾ ಬಳಸುವ ಪ್ರಮಾಣ ಶೇ 40ರಷ್ಟು ಕಡಿಮೆಯಾಗಿದೆ ಎಂದು ವರದಿಯಲ್ಲಿ ಹೇಳಿದೆ.

‘ಮಾದಕವಸ್ತುಗಳ ಬಳಕೆಯಿಂದ ಉಂಟಾಗುವ ಅಪಾಯಗಳ ಬಗ್ಗೆ ಜನರಲ್ಲಿರುವ ಅರಿವಿನ ಕೊರತೆಯೇ ಇಂದಿನ ಬೆಳವಣಿಗೆಗೆ ಕಾರಣ. ಈ ಹಿನ್ನೆಲೆಯಲ್ಲಿ ಮಾದಕವಸ್ತುಗಳ ಕುರಿತು ಜನರ ಮನೋಭಾವ ಮತ್ತು ಅದರಿಂದ ಉಂಟಾಗುವ ಅಪಾಯದ ನೈಜತೆಯನ ನಡುವಿರುವ ಕಂದಕವನ್ನು ತೆಗೆದು ಹಾಕಬೇಕು. ಅದಕ್ಕಾಗಿ ಈ ಮಾದಕವಸ್ತುಗಳ ಬಳಕೆಯ ಅಪಾಯ ಕುರಿತು ಯುವಕರಲ್ಲಿ ಅರಿವು ಮೂಡಿಸಬೇಕು, ಈ ಮೂಲಕ ಸಾರ್ವಜನಿಕ ಆರೋಗ್ಯವನ್ನು ರಕ್ಷಿಸಬೇಕು‘ ಎಂದು ಯುಎನ್‌ಒಡಿಸಿ ಕಾರ್ಯನಿರ್ವಾಹಕ ನಿರ್ದೇಶಕ ಘಡಾ ವಾಲಿ ಹೇಳಿದ್ದಾರೆ.

‘ಅಂದಾಜಿನ ಪ್ರಕಾರ, 15 ರಿಂದ 64 ವಯೋಮಾನದವರಲ್ಲಿ ಶೇ 5.5 ರಷ್ಟು ಜನರು ಒಂದು ಬಾರಿಯಾದರೂ ಮಾದಕ ವಸ್ತುಗಳನ್ನು ಬಳಸಿದ್ದಾರೆ. ಆದರೆ 3.63 ಕೋಟಿ ಜನರು ಅಥವಾ ಒಟ್ಟು ಮಾದಕ ವಸ್ತುಗಳನ್ನು ಬಳಸುವವರಲ್ಲಿ ಶೇ 13ರಷ್ಟು ಜನರು ಮಾದಕವಸ್ತುಗಳು ತಂದೊಡ್ಡುವ ಅಪಾಯದಿಂದ ಬಳಲುತ್ತಿದ್ದಾರೆ‘ ಎಂದು ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT