ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಡಿಟರೇನಿಯನ್‌ ಸಮುದ್ರದಲ್ಲಿ ಮುಳುಗಿ 75 ವಲಸಿಗರು ಸಾವು!

Last Updated 21 ನವೆಂಬರ್ 2021, 5:30 IST
ಅಕ್ಷರ ಗಾತ್ರ

ರೋಮ್‌: ಲಿಬಿಯಾದ ಉತ್ತರಕ್ಕಿರುವ ಮೆಡಿಟರೇನಿಯನ್‌ ಸಮುದ್ರದಲ್ಲಿ 75 ವಲಸಿಗರು ಮುಳುಗಿ ಮೃತಪಟ್ಟಿದ್ದಾರೆ ಎಂದು ಅಂತರರಾಷ್ಟ್ರೀಯ ವಲಸೆ ಸಂಘಟನೆ (ಐಒಎಂ) ತಿಳಿಸಿದೆ.

ವಲಸಿಗರು ದೋಣಿಯೊಂದರಲ್ಲಿ ಇಟಲಿಯತ್ತ ಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ವಿಶ್ವಸಂಸ್ಥೆಯ ಅಂಗಸಂಸ್ಥೆಯಾಗಿರುವ ಐಒಎಂ ಟ್ವೀಟ್‌ ಮಾಡಿದೆ.

ದೋಣಿಯಲ್ಲಿದ್ದವರ ಪೈಕಿ 15 ಜನರನ್ನು ಮೀನುಗಾರರು ರಕ್ಷಿಸಿದ್ದು, ಅವರನ್ನು ಲಿಬಿಯಾದ ವಾಯವ್ಯ ಭಾಗದಲ್ಲಿರುವ ಜುವಾರಾ ಬಂದರಿಗೆ ಕರೆತರಲಾಗಿದೆ ಎಂದೂ ಸಂಘಟನೆ ತಿಳಿಸಿದೆ.

‘ಮೆಡಿಟರೇನಿಯನ್‌ ಸಮುದ್ರದಲ್ಲಿ ಸಾಗುತ್ತಿದ್ದ ವೇಳೆ ತೊಂದರೆಗೆ ಸಿಲುಕಿದ್ದ, ಮಕ್ಕಳು ಸೇರಿದಂತೆ 420 ವಲಸಿಗರನ್ನು ಶನಿವಾರ ರಕ್ಷಿಸಲಾಗಿದೆ’ ಎಂದು ಇಟಲಿಯ ಕೋಸ್ಟ್‌ಗಾರ್ಡ್ ಪ್ರಕಟಣೆ ತಿಳಿಸಿದೆ.

ಆಫ್ರಿಕಾ, ಮಧ್ಯ ಪ್ರಾಚ್ಯ ಹಾಗೂ ದಕ್ಷಿಣ ಏಷ್ಯಾದಿಂದ ಸಾವಿರಾರು ಜನ ವಲಸಿಗರು ಪ್ರತಿವರ್ಷ ಯುರೋಪ್‌ ರಾಷ್ಟ್ರಗಳಿಗೆ ತೆರಳಲು ಅಪಾಯಕಾರಿಯಾದ ಮೆಡಿಟರೇನಿಯನ್‌ ಸಮುದ್ರ ದಾಟಲು ಪ್ರಯತ್ನಿಸುತ್ತಾರೆ. ಪ್ರಯಾಣಿಸಲು ಯೋಗ್ಯವಲ್ಲದ ದೋಣಿಗಳು ಹಾಗೂ ಅವುಗಳ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಯಾಣಿಸುವುದು ಕಂಡುಬರುತ್ತದೆ ಎಂದು ಐಒಎಂ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT