ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆಯ ರಾಷ್ಟ್ರೀಯತೆ: ವಿಶ್ವಸಂಸ್ಥೆ ಟೀಕೆ

Last Updated 12 ಮಾರ್ಚ್ 2021, 6:54 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಲಸಿಕೆಯ ರಾಷ್ಟ್ರೀಯತೆ ಮತ್ತು ಲಸಿಕೆಯ ಸಂಗ್ರಹಣೆ ವಿಚಾರಗಳನ್ನು ಟೀಕಿಸಿರುವ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್‌,ಕೋವಿಡ್‌–19ರ ಲಸಿಕೆ ಉತ್ಪಾದಕರೊಂದಿಗಿನ ಒಪ್ಪಂದಗಳು ಜಗತ್ತಿನ ಎಲ್ಲ ಜನರಿಗೆ ಲಸಿಕೆ ದೊರೆಯಬೇಕು ಎಂಬುದರ ಆಶಯವನ್ನು ದುರ್ಬಲಗೊಳಿಸುತ್ತದೆ ಎಂದು ದೂರಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್–19 ಅನ್ನು ಸಾಂಕ್ರಾಮಿಕ ಎಂದು ಘೋಷಿಸಿ ವರ್ಷ ಸಂದಿರುವ ಸಂದರ್ಭದಲ್ಲಿ ಪ್ರಕಟಣೆ ಹೊರಡಿಸಿರುವ ಅವರು, ‘ಜಾಗತಿಕ ಲಸಿಕಾ ಅಭಿಯಾನವು ನಮ್ಮ ಕಾಲದ ಶ್ರೇಷ್ಠ ನೈತಿಕ ಪರೀಕ್ಷೆ’ ಎಂದಿದ್ದಾರೆ.

ಇಲ್ಲಿಯವರೆಗೆ ಕಡಿಮೆ ಆದಾಯ ಇರುವ ಹಲವು ರಾಷ್ಟ್ರಗಳಲ್ಲಿನ ಜನರು ಲಸಿಕೆಯ ಮೊದಲ ಡೋಸ್‌ ಅನ್ನೂ ಪಡೆದಿಲ್ಲ. ಹೀಗಾಗಿ ಇಡೀ ಸಮಾಜವನ್ನು ಈ ವೈರಸ್‌ನ ಹಿಡಿತದಿಂದ ಹೊರತರಲು ಶ್ರಮಿಸಿ, ಬದ್ಧತೆ ತೋರಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.

ಈ ಲಸಿಕೆಗಳನ್ನು ಜಾಗತಿಕವಾಗಿ ಸಾರ್ವಜನಿಕರ ಒಳಿತಿನ ಉದ್ದೇಶದಿಂದ ನೋಡಬೇಕಿದೆ ಎಂದು ಗುಟೆರೆಸ್‌ ಪುನರುಚ್ಚರಿಸಿದ್ದಾರೆ.

ಎಲ್ಲರಿಗೂ ಸಾಕಷ್ಟು ಲಸಿಕೆಗಳನ್ನು ತಯಾರಿಸಲು ಮತ್ತು ವಿತರಿಸಲು ಇಡೀ ಜಗತ್ತು ಒಂದಾಗಬೇಕು. ಅದಕ್ಕಾಗಿ ವಿಶ್ವದಾದ್ಯಂತ ಲಸಿಕೆಯ ಉತ್ಪಾದನಾ ಸಾಮರ್ಥ್ಯವನ್ನು ದ್ವಿಗುಣಗೊಳಿಸಬೇಕು ಎಂದು ಕರೆ ನೀಡಿರುವ ಅವರು, ಈ ಕೆಲಸಗಳು ಈಗಿನಿಂದಲೇ ಪ್ರರಂಭ ಆಗಬೇಕು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT