ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಸಂಸ್ಥೆ ಪಶ್ಚಿಮ ದೇಶಗಳ ಪ್ರಭಾವಕ್ಕೆ ಒಳಗಾಗಿರುವುದು ಸರಿಯಲ್ಲ: ಲಾವ್ರೊವ್‌

Last Updated 24 ಫೆಬ್ರುವರಿ 2022, 14:44 IST
ಅಕ್ಷರ ಗಾತ್ರ

ಮಾಸ್ಕೊ(ಪಿಟಿಐ): ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್‌ ಅವರು ಪಶ್ಚಿಮ ದೇಶಗಳ ಪ್ರಭಾವಕ್ಕೆ ಒಳಗಾಗಿ ಮಾತನಾಡುತ್ತಿರುವುದು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್‌ ಲಾವ್ರೊವ್‌ ಹೇಳಿದ್ದಾರೆ.

ಸಿರಿಯಾದ ವಿಶ್ವಸಂಸ್ಥೆಯ ವಿಶೇಷ ರಾಯಬಾರಿ ಗೈರ್‌ ಪೆಡರ್ಸನ್‌ ಅವರೊಂದಿಗೆ ಮಾತುಕತೆ ನಡೆಸುವ ಆರಂಭದಲ್ಲಿ ಲಾವ್ರೊವ್‌, ವಿಶ್ವಸಂಸ್ಥೆ ಮುಖ್ಯಸ್ಥರು ಇತ್ತೀಚಿಗೆ ವಿಶ್ವಸಂಸ್ಥೆಯ ಸನ್ನದು ಮತ್ತು ತಮ್ಮ ಸ್ಥಾನಕ್ಕೆಹೊಂದಾಣಿಕೆ ಆಗದಂತೆ ಹೇಳಿಕೆ ನೀಡುತ್ತಿದ್ದಾರೆ. ಅವರುಪಾಶ್ಚಿಮಾತ್ಯ ರಾಷ್ಟ್ರಗಳ ಪ್ರಭಾವಕ್ಕೆ ಒಳಗಾಗಿರುವುದಕ್ಕೆ ನಮ್ಮ ವಿಷಾದವಿದೆ ಎಂದು ಹೇಳಿದ್ದಾರೆ ಎಂದು ಟಿಎಎಸ್‌ಎಸ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಉಕ್ರೇನ್‌ ಮತ್ತು ಡೊನೆಟ್ಸ್ಕ್‌ ಲುಹಾನ್ಸ್ಕ್‌ ಪ್ರದೇಶಗಳ ವಿಚಾರವಾಗಿ ಆರಂಭದಿಂದ ರಷ್ಯಾಮಿಲಿಟರಿಯ ಕಾರ್ಯಾಚರಣೆ ಘೋಷಿಸುವವರೆಗೂ ರಷ್ಯಾದ ನಿರ್ಧಾರ ಮತ್ತು ವಾಡ್ಲಿಮಿರ್‌ ಪುಟಿನ್‌ ಅವರನ್ನು ಗುಟರೆಸ್‌ ಹಲವು ಬಾರಿ ಟೀಕಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT