ಶನಿವಾರ, ನವೆಂಬರ್ 28, 2020
22 °C
ವಿಶ್ವಸಂಸ್ಥೆ ಬಿಡುಗಡೆ ಮಾಡಿದ ವರದಿಯಲ್ಲಿ ಉಲ್ಲೇಖ

ಭಾರತದಲ್ಲಿ ’ಕೋವಿಡ್‌ 19‘ ನಿರ್ವಹಣೆಗೆ ‘ಇಸ್ರೊ‘ ನೆರವು: ವಿಶ್ವಸಂಸ್ಥೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಸ್ಥೆ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ), ಜಿಯೋಸ್ಪೇಷಿಯಲ್ ಉಪಕರಣಗಳ ಮೂಲಕ ಕೋವಿಡ್‌ 19 ಸಾಂಕ್ರಾಮಿಕ ನಿರ್ವರ್ಹಣೆ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಳ್ಳುತ್ತಿರುವ ಸುಸ್ಥಿರ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ನೆರವಾಗುತ್ತಿದೆ ಎಂದು ವಿಶ್ವಸಂಸ್ಥೆಯ ವರದಿಯಲ್ಲಿ ಉಲ್ಲೇಖವಾಗಿದೆ.

ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ‘ಜಿಯೋಸ್ಪೇಷಿಯಲ್  ಪ್ರಾಕ್ಟೀಸಸ್‌ ಫಾರ್ ಸಸ್ಟೈನಬಲ್ ಡೆವಲಪ್‌ಮೆಂಟ್ ಇನ್ ಏಷ್ಯಾ ಅಂಡ್ ಪೆಸಿಫಿಕ್‌ 2020‘ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ. ಇದರಲ್ಲಿ ಕೋವಿಡ್‌ 19 ಸಾಂಕ್ರಾಮಿಕದ ನಿರ್ವಹಣೆಯಲ್ಲಿ ಇಸ್ರೋ ಅಭಿವೃದ್ಧಿಪಡಿಸಿ ನಿರ್ವಹಿಸುತ್ತಿರುವ ಜಿಯೊಸ್ಪೇಷಿಯಲ್ ಡೇಟಾ ಮತ್ತು ಸೇವೆಗಳು ಮತ್ತು ವಿಶ್ಲೇಷಣೆಗಾಗಿ ಬಳಸುವ ಸಾಧನಗಳನ್ನೊಳಗೊಂಡ ‘ಭುವನ್‌‘ ರಾಷ್ಟ್ರೀಯ ಜಿಯೊ ಪೋರ್ಟಲ್‌ನ ಪಾತ್ರದ ಬಗ್ಗೆಯೂ ಉಲ್ಲೇಖಿಸಲಾಗಿದೆ.

‘ಕೋವಿಡ್‌ 19 ಸಾಂಕ್ರಾಮಿಕ ರೋಗ ನಿರ್ವಹಣೆ ಮತ್ತು ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೆಲವೊಂದು ಕ್ರಮಗಳನ್ನು ಕೈಗೊಂಡಿವೆ. ಇಸ್ರೊ ಸಂಸ್ಥೆ ‘ಭುವನ್‌‘ – ಜಿಯೋ ಪೋರ್ಟ್‌ಲ್‌ನಲ್ಲಿರುವ ಜಿಯೊಸ್ಪೇಷಿಯಲ್ ಉಪಕರಣಗಳ ಮೂಲಕ ಈ ಸರ್ಕಾರಗಳಿಗೆ ಕೋವಿಡ್‌ ನಿರ್ವಹಣೆಗೆ ನೆರವಾಗುತ್ತಿದೆ‘ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಕೋವಿಡ್‌ ಸೋಂಕು ಪತ್ತೆ ಹಚ್ಚುವುದು, ಸೋಂಕು ಹರಡುವ ತಾಣಗಳನ್ನು ಗುರುತಿಸುವುದು, ತರಕಾರಿ ಮಾರುಕಟ್ಟೆಗಳು, ಆಹಾರ ಅಗತ್ಯವಿರುವ ಸ್ಥಳಗಳು, ಹೋಮ್ ಐಸೊಲೇಷನ್ ಮತ್ತು ಮಾಲಿನ್ಯ–  ಈ ಆರು ಅಂಶಗಳಿಗೆ ಸಂಬಂಧಿಸಿದಂತೆ ‘ಭುವನ್‘ ಜಿಯೋ–ವೇದಿಕೆ ಮೂಲಕ ಇಸ್ರೊ ಸೇವೆ ಒದಗಿಸಿದೆ‘ ಎಂದು ವರದಿಯಲ್ಲಿ ಹೇಳಿದೆ.

‘ದೇಶದಲ್ಲಿ ಪ್ರಸ್ತುತದ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಲು ಭಾರತಕ್ಕೆ ಡ್ಯಾಶ್‌ಬೋರ್ಡ್ ಅಗತ್ಯವಿರುವುದನ್ನು ಗಮನಿಸಿದ ಇಸ್ರೋ, ರೋಗ ಪತ್ತೆ ಮತ್ತು ಪ್ರಸ್ತುತದ ಮಾಹಿತಿಯನ್ನು ರಾಷ್ಟ್ರದಾದ್ಯಂತ ಜನರಿಗೆ ತಲುಪಿಸಲು ಜಿಯೋ-ಪೋರ್ಟಲ್ ಅನ್ನು ಮಾರ್ಪಡಿಸಿ, 'ಭುವನ್- ಕೋವಿಡ್‌19' ಅಭಿವೃದ್ಧಿಪಡಿಸಿತು‘ ಎಂದು ವರದಿ ಹೇಳಿದೆ.

ವಿಶ್ವಸಂಸ್ಥೆಯ ಏಷ್ಯಾ ಮತ್ತು ಪೆಸಿಫಿಕ್ ರಾಷ್ಟ್ರಗಳ ಆರ್ಥಿಕ ಮತ್ತು ಸಾಮಾಜಿಕ ಆಯೋಗ(ಇಎಸ್‌ಸಿಎಪಿ) ಬುಧವಾರ ಈ ವರದಿ ಬಿಡುಗಡೆ ಮಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು