ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ: ಪರಿಶೀಲನೆ ತೀವ್ರಗೊಳಿಸಿದ ವಿಶ್ವಸಂಸ್ಥೆ

Last Updated 7 ಅಕ್ಟೋಬರ್ 2022, 13:50 IST
ಅಕ್ಷರ ಗಾತ್ರ

ಜಿನೀವಾ: ರಷ್ಯಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪಗಳ ಕುರಿತ ಪರಿಶೀಲನೆಯನ್ನು ಮತ್ತಷ್ಟು ಹೆಚ್ಚಿಸಲು ಮುಂದಾಗಿರುವ ವಿಶ್ವಸಂಸ್ಥೆ, ಈ ಸಂಬಂಧ ಸ್ವತಂತ್ರ ತಜ್ಞರ ತಂಡವನ್ನು ರಚಿಸಲು ಶುಕ್ರವಾರ ನಿರ್ಧರಿಸಿದೆ.

ಉಕ್ರೇನ್‌ ವಿರುದ್ಧ ಯುದ್ಧ ಸಾರಿದ ನಂತರದ ದಿನಗಳಲ್ಲಿ ರಷ್ಯಾದಲ್ಲಿ ನಿಯಮಬಾಹಿರ ಬಂಧನಗಳು, ಭಿನ್ನಧ್ವನಿ ಹಾಗೂ ವಾಕ್‌ ಸ್ವಾತಂತ್ಯ್ರ ದಮನಿಸುವ ಪ್ರಕರಣಗಳೂ ಹೆಚ್ಚಾದವು ಎಂಬ ಆರೋಪಗಳ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಈ ಕ್ರಮಕ್ಕೆ ಮುಂದಾಗಿದೆ.

47 ಸದಸ್ಯಬಲದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಈ ಕುರಿತ ಪ್ರಸ್ತಾವವನ್ನು 17–6 ಮತಗಳಿಂದ ಅಂಗೀಕರಿಸಲಾಯಿತು. ಮಂಡಳಿಯ 24 ಸದಸ್ಯ ರಾಷ್ಟ್ರಗಳು ಮತದಾನದಿಂದ ದೂರ ಉಳಿದಿದ್ದವು.

ಈ ವರ್ಷದ ಆರಂಭದ ವರೆಗೂ ರಷ್ಯಾ ಕೂಡ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಸದಸ್ಯರಾಷ್ಟ್ರವಾಗಿತ್ತು. ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ, ಮಂಡಳಿ ಸದಸ್ಯತ್ವವನ್ನು ತ್ಯಜಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT