ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ಮೂರನೇ ಒಂದು ಭಾಗದಷ್ಟು ಮಕ್ಕಳು ಕಲಿಕೆಯಿಂದ ವಂಚಿತ

ಯನಿಸೆಫ್ ವರದಿ ಬಿಡುಗಡೆ; ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಹೆಚ್ಚು ಸಮಸ್ಯೆ
Last Updated 27 ಆಗಸ್ಟ್ 2020, 14:35 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಕೋವಿಡ್‌–19 ಪಿಡುಗಿನಿಂದಾಗಿ ಶಾಲೆ, ಕಾಲೇಜುಗಳಿಂದ ಮುಚ್ಚಿದ್ದರಿಂದ ಜಾಗತಿಕ ಶಿಕ್ಷಣ ಕ್ಷೇತ್ರದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಯುನಿಸೆಫ್‌ ಹೇಳಿದೆ.

ಲಾಕ್‌ಡೌನ್‌ನಿಂದಾಗಿ ಶಾಲೆ, ಕಾಲೇಜುಗಳು ಬಾಗಿಲು ತೆರೆಯದ ಕಾರಣ ವಿಶ್ವದ ಮೂರನೇ ಒಂದು ಭಾಗದಷ್ಟು (150 ಕೋಟಿ) ಮಕ್ಕಳು ಆನ್‌ಲೈನ್‌ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇದು ಜಾಗತಿಕ ಶಿಕ್ಷಣ ಕ್ಷೇತ್ರದ ತುರ್ತು ಪರಿಸ್ಥಿತಿಗೆ ನಾಂದಿ ಹಾಡಿದೆ ಎಂದು ಯುನಿಸೆಫ್‌ ವರದಿ ಆತಂಕ ವ್ಯಕ್ತಪಡಿಸಿದೆ.

ಈ ಅವಧಿಯಲ್ಲಿ ವಿಶ್ವದಾದ್ಯಂತ ಶಾಲೆಗಳು ಮುಚ್ಚಿದ ಕಾರಣ ಕನಿಷ್ಟ 46.30 ಕೋಟಿ ವಿದ್ಯಾರ್ಥಿಗಳು ಕಲಿಕೆಯಿಂದ ವಂಚಿತರಾಗಿದ್ದು, ಅವರಿಗೆ ಆನ್‌ಲೈನ್‌ ಶಿಕ್ಷಣವೂ ದೊರೆಯುತ್ತಿಲ್ಲ ಎಂದು ಯುನಿಸೆಫ್‌ ಕಾರ್ಯಕಾರಿ ನಿರ್ದೇಶಕಿ ಹೆನ್ರಿಟ್ಟಾ ಫೋರ್‌ ಹೇಳಿದ್ದಾರೆ.

ಈ ಬೆಳವಣಿಗೆಯಿಂದಾಗಿ ಆಫ್ರಿಕಾದ ಸಹರಾ ಉಪ ವಲಯವು ತೀವ್ರ ತೊಂದರೆಗೊಳಗಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿ ಪ್ರಾದೇಶಿಕ ಅಸಮಾನತೆಗೆ ಕಾರಣವಾಗಿದೆ. ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿಯೇ ಅತಿ ಹೆಚ್ಚು ಮಕ್ಕಳು, ಅಂದರೆ ಕನಿಷ್ಠ 14.7 ಕೋಟಿ ವಿದ್ಯಾರ್ಥಿಗಳು ಕಲಿಕೆಯಿಂದ ವಂಚಿತರಾಗಿದ್ದಾರೆ ಎಂದು ಬುಧವಾರ ರಾತ್ರಿ ಬಿಡುಗಡೆ ಮಾಡಿದ ಯನಿಸೆಫ್ ವರದಿಯಲ್ಲಿ ಉಲ್ಲೇಖವಾಗಿದೆ.

ಲಾಕ್‌ಡೌನ್‌ನಿಂದ ಶಾಲೆ ಮುಚ್ಚಿರುವುದು ಬಹುದೊಡ್ಡ ಪ್ರಮಾಣದಲ್ಲಿ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಿದೆ. ಇದರಿಂದ ಜಾಗತಿಕ ಶೈಕ್ಷಣಿಕ ತುರ್ತುಪರಿಸ್ಥಿ ನಿರ್ಮಾಣವಾಗಿದೆ. ಇದರ ಸಾಮಾಜಿಕ ಮತ್ತು ಆರ್ಥಿಕದುಷ್ಪರಿಣಾಮಗಳು ಮುಂದಿನ ದಶಕಗಳಲ್ಲಿ ಗೋಚರಿಸಲಿವೆ ಯುನಿಸೆಫ್ ಕಾರ್ಯಕಾರಿ ನಿರ್ದೇಶಕಿಹೆನ್ರಿಟ್ಟಾ ಫೋರ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT