ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೆಮನ್‌ ಬಂಡುಕೋರರಿಂದ ನೇಮಕವಾದ 2 ಸಾವಿರ ಮಕ್ಕಳು ಯುದ್ಧದಲ್ಲಿ ಸಾವು: ವಿಶ್ವಸಂಸ್ಥೆ

Last Updated 30 ಜನವರಿ 2022, 13:22 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಯೆಮನ್‌ ಬಂಡುಕೋರರು ತಮ್ಮ ಗುಂಪಿಗೆ ನೇಮಕ ಮಾಡಿಕೊಂಡ ಸುಮಾರು 2 ಸಾವಿರ ಮಕ್ಕಳು 2020ರ ಜನವರಿ ಮತ್ತು 2021ರ ಮೇ ನಡುವೆ ಯುದ್ಧಭೂಮಿಯಲ್ಲಿ ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆಯ ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ.

ಇರಾನ್‌ ಬೆಂಬಲಿತ ಹೂತಿ ಬಂಡುಕೋರರು ಯುದ್ಧದಲ್ಲಿ ಹೋರಾಡಲು ಯುವಕರನ್ನು ಸೆಳೆಯುವ ಶಿಬಿರಗಳು ಮತ್ತು ಕೋರ್ಸುಗಳನ್ನು ನಡೆಸುತ್ತಿದ್ದಾರೆ.

ವಿಶ್ವಸಂಸ್ಥೆಯ ತಜ್ಞರು ಕೆಲವು ಶಾಲೆಗಳಲ್ಲಿ ಬೇಸಿಗೆ ಶಿಬಿರಗಳು ಮತ್ತು ಹೂತಿಗಳು ತಮ್ಮ ಸಿದ್ಧಾಂತಗಳನ್ನು ಹಂಚಿಕೊಳ್ಳುವ ಮಸೀದಿಯನ್ನು ತನಿಖೆ ನಡೆಸಿದ್ದಾರೆ. ಸೌದಿ ನೇತೃತ್ವದ ಒಕ್ಕೂಟದಿಂದ ಬೆಂಬಲಿತ ಹೂತಿಗಳು ಯೆಮನ್‌ ಸರ್ಕಾರದೊಂದಿನ ಏಳು ವರ್ಷಗಳ ಯುದ್ಧಕ್ಕೆ ಮಕ್ಕಳನ್ನು ನೇಮಿಸಿಕೊಳ್ಳಲು ‍ಪ್ರಯತ್ನಿಸಿದ್ದಾರೆ ಎಂದು ತಜ್ಞರು ಹೇಳಿದ್ದಾರೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶನಿವಾರ ಪ್ರಸಾರವಾದ ವರದಿ ಹೇಳಿದೆ.

‘ತರಬೇತಿ ವೇಳೆ ಮಕ್ಕಳಿಗೆ ‘ಅಮೆರಿಕಕ್ಕೆ ಸಾವು, ಇಸ್ರೇಲ್‌ಗೆ ಸಾವು, ಯಹೂದಿಗಳಿಗೆ ಶಾಪ, ಇಸ್ಲಾಂಗೆ ಜಯ’ ಎಂಬ ಹೂತಿ ಘೋಷಣೆ ಕೂಗುವಂತೆ ಸೂಚಿಸಲಾಯಿತು’ ಎಂದು ನಾಲ್ಕು ತಜ್ಞರ ಸಮಿತಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT