ಬುಧವಾರ, ಜೂನ್ 16, 2021
21 °C

ವಿಶ್ವಸಂಸ್ಥೆಯಿಂದ ಭಾರತಕ್ಕೆ 10 ಸಾವಿರ ಆಮ್ಲಜನಕ ಕಾನ್ಸಂಟ್ರೇಟರ್‌ಗಳ ನೆರವು

ಪಿಟಿಐ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಹಲವು ಅಂಗಸಂಸ್ಥೆಗಳು ಸುಮಾರು 10 ಸಾವಿರ ಆಮ್ಲಜನಕ ಕಾನ್ಸಂಟ್ರೇಟರ್‌ಗಳು ಮತ್ತು ಒಂದು ಕೋಟಿ ವೈದ್ಯಕೀಯ ಮಾಸ್ಕ್‌ಗಳು ಮತ್ತು 15 ಲಕ್ಷ ಫೇಸ್‌ಶೀಲ್ಡ್‌ಗಳನ್ನು ಭಾರತಕ್ಕೆ ಕಳುಹಿಸಿವೆ.

‘ಕೋವಿಡ್‌–19 ನಿಯಂತ್ರಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯು ಭಾರತಕ್ಕೆ ಎಲ್ಲ ರೀತಿಯ ನೆರವು ನೀಡುತ್ತಿದೆ. ಇದರ ಭಾಗವಾಗಿ ಹಲವು ವೈದ್ಯಕೀಯ ಉಪಕರಣಗಳನ್ನು ಒದಗಿಸಲಾಗಿದೆ’ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಅವರ ವಕ್ತಾರ ಸ್ಟೆಫನ್‌ ದುಜಾರ್ರಿಕ್‌ ತಿಳಿಸಿದ್ದಾರೆ.

‘ಭಾರತದಲ್ಲಿ ಸ್ಥಳೀಯವಾಗಿ ಮತ್ತು ರಾಷ್ಟ್ರಮಟ್ಟದಲ್ಲಿ ವಿಶ್ವಸಂಸ್ಥೆಯ ವಿವಿಧ ತಂಡಗಳು ಕಾರ್ಯನಿರ್ವಹಿಸುತ್ತಿವೆ. ವೆಂಟಿಲೇಟರ್‌ಗಳು ಮತ್ತು ಆಮ್ಲಜನಕ ಉತ್ಪಾದನೆ ಘಟಕಗಳನ್ನು ಸಹ ವಿಶ್ವಸಂಸ್ಥೆ ತಂಡ ಖರೀದಿಸಿದೆ’ ಎಂದು ತಿಳಿಸಿದ್ದಾರೆ.

‘ಕೋವಿಡ್‌–19 ಲಸಿಕೆಗಳ ಸಂಗ್ರಹಕ್ಕಾಗಿ ಯುನಿಸೆಫ್‌ ವಿಶೇಷ ಉಪಕರಣವನ್ನು ಒದಗಿಸಲಿದೆ. ವಿಶ್ವಸಂಸ್ಥೆಯ ತಂಡಗಳು ಪರೀಕ್ಷಾ ಯಂತ್ರಗಳು ಮತ್ತು ಕಿಟ್‌ಗಳು ಹಾಗೂ ಥರ್ಮಲ್‌ ಸ್ಕ್ಯಾನರ್‌ಗಳನ್ನು ಸಹ ಒದಗಿಸಿವೆ. ತಾತ್ಕಾಲಿಕ ಆರೋಗ್ಯ ಸೌಲಭ್ಯಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯು ಟೆಂಟ್‌ಗಳು ಮತ್ತು ಬೆಡ್‌ಗಳನ್ನು ಒದಗಿಸಿದೆ. ಜತೆಗೆ, ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ತಜ್ಞ ವೈದ್ಯರನ್ನು ನಿಯೋಜಿಸಿದೆ’ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ... ಕರ್ಫ್ಯೂ ನಿರೀಕ್ಷಿತ ಫಲ ನೀಡಿಲ್ಲ, ಲಾಕ್‌ಡೌನ್‌ ಮಾಡುವುದು ಅನಿವಾರ್ಯ: ಬಿಎಸ್‌ವೈ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು