ಅಫ್ಗಾನಿಸ್ತಾನ ತೆಕ್ಕೆಗೆ ಬಗ್ರಾಮ್ ವಾಯುನೆಲೆ ಹಸ್ತಾಂತರಿಸಿದ ಅಮೆರಿಕ

ಕಾಬೂಲ್: ಬಗ್ರಾಮ್ ವಾಯುನೆಲೆಯನ್ನು ಅಮೆರಿಕ ಇಪ್ಪತ್ತು ವರ್ಷಗಳ ಬಳಿಕ ಅಫ್ಗಾನಿಸ್ತಾನಕ್ಕೆ ಹಸ್ತಾಂತರಿಸಿದೆ.
ತಾಲಿಬಾನ್ ವಿರುದ್ಧದ ಸಂಘರ್ಷ ಕೊನೆಗೊಂಡ ಬಳಿಕ ಅಫ್ಘಾನಿಸ್ತಾನದಲ್ಲಿಯೇ ನೆಲೆಯೂರಿದ್ದ ಅಮೆರಿಕದ ಪಡೆಗಳು ಹಂತಹಂತವಾಗಿ ಸ್ವದೇಶಕ್ಕೆ ವಾಪಸ್ ತೆರಳುತ್ತಿದ್ದು, ಈ ಪ್ರಕ್ರಿಯೆಗೆ ಪೂರಕವಾಗಿ ವಾಯುನೆಲೆಯನ್ನು ವಾಪಸ್ ಮಾಡಲಾಗುತ್ತಿದೆ.
ಅಮೆರಿಕದ ಮಿಲಿಟರಿ ಪಡೆಗಳ ನಿರ್ಗಮನ ಮತ್ತು ಅಲ್ಲಿಂದ ಸಲಕರಣೆಗಳನ್ನು ವಾಪಸ್ ತೆಗೆದುಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ. ಅದು ಪೂರ್ಣಗೊಳ್ಳಲು ಇನ್ನಷ್ಟು ಸಮಯ ಬೇಕಾಗಬಹುದು ಅಧಿಕಾರಿಗಳು ಹೇಳಿದ್ದಾರೆ.
ಜಮ್ಮು- ಕಾಶ್ಮೀರದ ಪುಲ್ವಾಮಾದಲ್ಲಿ ಎನ್ಕೌಂಟರ್: ಉಗ್ರರ ಗುಂಡಿಗೆ ಯೋಧ ಹುತಾತ್ಮ
ಸೆಪ್ಟೆಂಬರ್ 11ರ ಒಳಗಾಗಿ ಅಫ್ಗಾನಿಸ್ತಾನ ತೊರೆದು ಬರಬೇಕು ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಗಡುವು ವಿಧಿಸಿದ್ದಾರೆ. ಹೀಗಾಗಿ ಈ ಅವಧಿಯ ಒಳಗಾಗಿ ಭದ್ರತಾ ಪಡೆಗಳು ಅಮೆರಿಕಾಗೆ ವಾಪಸ್ ತೆರಳಬೇಕಿದೆ.
ಜಮ್ಮು- ಕಾಶ್ಮೀರ: ಪಾಕ್ನ ಮತ್ತೊಂದು ಡ್ರೋನ್ ಮೇಲೆ ಬಿಎಸ್ಎಫ್ ಗುಂಡಿನ ದಾಳಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.