ಗುರುವಾರ , ಆಗಸ್ಟ್ 11, 2022
26 °C
ಐಎಂಎಫ್‌–ಪಾಕಿಸ್ತಾನ ನಡುವೆ ಒಪ್ಪಂದ

ಪಾಕಿಸ್ತಾನಕ್ಕೆ ಹಣಕಾಸು ನೆರವು ನೀಡಲು ಅಮೆರಿಕ ಸಮ್ಮತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಇಸ್ಲಾಮಾಬಾದ್‌: ಆರ್ಥಿಕ ಸಂಕಷ್ಟದಲ್ಲಿರುವ  ಪಾಕಿಸ್ತಾನಕ್ಕೆ ಅಂತರ ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಜೊತೆಗೂಡಿ ಸಾಲ ನೀಡುವ ಮೂಲಕ ನೆರವಾಗಲು ಅಮೆರಿಕ ಒಪ್ಪಿಗೆ ನೀಡಿದೆ ಎಂದು ಮಾಧ್ಯಮ ವರದಿ ಮಾಡಿದೆ.

 ಐಎಂಎಫ್‌ ಮತ್ತು ಪಾಕಿಸ್ತಾನ ನಡುವೆ ಅನುದಾನ ವಿಸ್ತರಣೆ ಸೌಲಭ್ಯ (ಇಎಫ್‌ಎಫ್‌) ಕುರಿತ ಒಪ್ಪಂದದ ಬಗ್ಗೆ ಸಿಬ್ಬಂದಿ ಮಟ್ಟದಲ್ಲಿ ಮಾತುಕತೆ ನಡೆದಿಲ್ಲ. ಆದರೆ ಈ ಒಪ್ಪಂದದ ಮೂಲಕ ಪಾಕಿಸ್ತಾನಕ್ಕೆ ನೆರವು ನೀಡಲು ಅಮೆರಿಕ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿದ್ದಾಗಿ ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ.

2019 ಜುಲೈನಲ್ಲಿ ಪಾಕಿಸ್ತಾನ ಐಎಂಎಫ್‌ನಿಂದ 39 ತಿಂಗಳಲ್ಲಿ 6 ಬಿಲಿಯನ್‌ ಡಾಲರ್‌ (₹46,769 ಕೋಟಿ) ಇಎಫ್‌ಎಫ್‌ ಪಡೆಯುವ ಒಪ್ಪಂದ ಮಾಡಿಕೊಂಡಿತ್ತು. ಆದರೆ ಹಿಂದಿನ ಸರ್ಕಾರ ಒಪ್ಪಂದದಿಂದ ಹಿಂದೆ ಸರಿದಾಗ 3 ಬಿಲಿಯನ್‌ ಡಾಲರ್‌ (₹23,384 ಕೋಟಿ) ಬಟಾವಡೆಯನ್ನು ಐಎಂಎಫ್‌ ನಿಲ್ಲಿಸಿತ್ತು. ಸದ್ಯ ಈ 3 ಬಿಲಿಯನ್‌ ಡಾಲರ್‌ ಜೊತೆಗೆ ಇನ್ನೂ ಹೆಚ್ಚಿನ ಮೊತ್ತವನ್ನು ಪಡೆಯಲು ಪಾಕಿಸ್ತಾನ ನಿರ್ಧರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು