ಮಂಗಳವಾರ, ಸೆಪ್ಟೆಂಬರ್ 29, 2020
28 °C
ಉಗ್ರರ ಚಟುವಟಿಕೆಗೆ ಪ್ರಾಯೋಜಕತ್ವ ವಹಿಸುವಲ್ಲಿ ಮೊದಲ ಸ್ಥಾನ: ರಾಯಭಾರಿ ಕೆಲಿ ಕ್ರಾಫ್ಟ್‌

ಭಯೋತ್ಪಾದನೆಗೆ ಇರಾನ್‌ ಕುಮ್ಮಕ್ಕು: ಅಮೆರಿಕ

ಎಪಿ Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಸ್ಥೆ: ‘ಭಯೋತ್ಪಾದನೆ ಚಟುವಟಿಕೆಗಳಿಗೆ ಪ್ರಾಯೋಜಕತ್ವ ವಹಿಸುವಲ್ಲಿ ಇರಾನ್‌ ಮೊದಲ ರಾಷ್ಟ್ರವಾಗಿದೆ' ಎಂದು ವಿಶ್ವಸಂಸ್ಥೆಯ ಅಮೆರಿಕದ ರಾಯಭಾರಿ ಕೆಲಿ ಕ್ರಾಫ್ಟ್‌ ಆರೋಪಿಸಿದ್ದಾರೆ.

‘ಒಂದು ವೇಳೆ, ಇರಾನ್‌ ಮೇಲೆ ವಿಶ್ವಸಂಸ್ಥೆಯ ಶಸ್ತ್ರಾಸ್ತ್ರ ನಿರ್ಬಂಧ ವಿಧಿಸುವ ನಿರ್ಣಯಕ್ಕೆ ರಷ್ಯಾ ಮತ್ತು ಚೀನಾ ವಿರೋಧ ವ್ಯಕ್ತಪಡಿಸಿದರೆ ಆ ರಾಷ್ಟ್ರಗಳು ಸಹ ಭಯೋತ್ಪಾದನೆಗೆ ಬೆಂಬಲ ಸೂಚಿಸಿದಂತಾಗುತ್ತವೆ’ ಎಂದು ಹೇಳಿದ್ದಾರೆ.

‌‘ಭಯೋತ್ಪಾದನೆಗೆ ರಷ್ಯಾ ಮತ್ತು ಚೀನಾ ಸಹಪ್ರಾಯೋಜಕತ್ವ ವಹಿಸಿಕೊಳ್ಳುವುದಿಲ್ಲ ಎನ್ನುವ ಭರವಸೆ ಇದೆ. ಈ ಮೂಲಕ ಮಧ್ಯ ಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ಪ್ರಾಮುಖ್ಯತೆ ನೀಡುತ್ತವೆ’ ಎಂದು ಹೇಳಿದ್ದಾರೆ.

‘ರಷ್ಯಾ ಮತ್ತು ಚೀನಾ ತಮ್ಮ ರಾಷ್ಟ್ರಗಳ ಗಡಿ ಹೊರಗೆ ಗೊಂದಲ, ಸಂಘರ್ಷ ಉತ್ತೇಜಿಸುತ್ತಿವೆ. ಹೀಗಾಗಿ, ಈ ರಾಷ್ಟ್ರಗಳನ್ನು ಮೂಲೆಗುಂಪು ಮಾಡಬೇಕಾದ ಅಗತ್ಯವಿದೆ’ ಎಂದು ಹೇಳಿದ್ದರೆ.

‘ಇರಾನ್‌ ವಿರುದ್ಧದ ಶಸ್ತ್ರಾಸ್ತ್ರ ನಿರ್ಬಂಧದ ಬಗ್ಗೆ ನಿರ್ಧಾರ ಕೈಗೊಳ್ಳಲು ವಿಶ್ವಸಂಸ್ಥೆ ಮುಂದಿನ ವಾರ ಭದ್ರತಾ ಸಮಿತಿಯ ಸಭೆ ಕರೆದಿದೆ’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ  ಬುಧವಾರ ಹೇಳಿದ್ದರು.

ಈ ಸಂಬಂಧ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರೆಸ್‌ಗೆ ಪ್ರತ್ಯೇಕ ಪತ್ರ ಬರೆದಿರುವ ರಷ್ಯಾ ಮತ್ತು ಚೀನಾದ ವಿದೇಶಾಂಗ ಸಚಿವರು, ಭದ್ರತಾ ಮಂಡಳಿಯ 15 ಸದಸ್ಯರಲ್ಲಿ ಕನಿಷ್ಠ 9 ಸದಸ್ಯರು ನಿರ್ಣಯದ ಪರವಾಗಿದ್ದರೆ ವಿಟೊ ಅಧಿಕಾರ ಚಲಾಯಿಸುವುದಾಗಿ ತಿಳಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು