ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಬೂಲ್‌ ದಾಳಿ: ಐಸಿಸ್ ಉಗ್ರನ ಮಾಹಿತಿ ಕೊಟ್ಟವರಿಗೆ 1 ಕೋಟಿ ಡಾಲರ್ ಬಹುಮಾನ

Last Updated 8 ಫೆಬ್ರುವರಿ 2022, 12:33 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಸುಮಾರು185 ಜನರ ಸಾವಿಗೆ ಕಾರಣವಾದ ಅಫ್ಗಾನಿಸ್ತಾನದ ಕಾಬೂಲ್‌ ವಿಮಾನ ನಿಲ್ದಾಣದ ಮೇಲಿನ ದಾಳಿಯ ರೂವಾರಿ ಐಸಿಸ್‌ ಖೊರಾಸನ್‌ ನಾಯಕ ಸನಾವುಲ್ಲಾ ಘಫಾರಿ ಕುರಿತು ಮಾಹಿತಿ ನೀಡಿದವರಿಗೆ 1 ಕೋಟಿ ಡಾಲರ್‌ ಬಹುಮಾನ ನೀಡುವುದಾಗಿ ಅಮೆರಿಕ ಘೋಷಿಸಿದೆ.

ಆಫ್ಗನ್‌ ಸರ್ಕಾರವನ್ನು ಅಸ್ಥಿರಗೊಳಿಸಿದ ತಾಲಿಬಾನ್‌ ಕಳೆದ ವರ್ಷ ಆಗಸ್ಟ್‌ 14 ರಂದು ದೇಶವನ್ನು ವಶಪಡಿಸಿಕೊಂಡಿತ್ತು. ಆ ಬಳಿಕ ಲಕ್ಷಾಂತರ ಆಫ್ಗನ್ನರು ಮತ್ತು ವಿದೇಶಿಯರು ದೇಶ ತೊರೆಯಲು ಕಾಬೂಲ್‌ ಅಂತಾರಾಷ್ಟ್ರೀಯ ವಿಮಾನದಲ್ಲಿ ಜಮಾಯಿಸಿದ್ದರು. ಆಗಸ್ಟ್ 26ರಂದು ಅಲ್ಲಿ ನಡೆದ ಆತ್ಮಾಹುತಿ ಬಾಂಬ್‌ ದಾಳಿಯಿಂದ ಅಮೆರಿಕದ 13 ಸೈನಿಕರು ಸೇರಿ 185 ಮಂದಿ ಮೃತಪಟ್ಟಿದ್ದರು. ಅಮೆರಿಕದ 18 ಸೈನಿಕರ ಸಹಿತ 150 ಜನರು ಗಾಯಗೊಂಡಿದ್ದರು.

1994ರಲ್ಲಿ ಅಫ್ಗಾನಿಸ್ತಾನದಲ್ಲಿ ಜನಿಸಿದ ‌ಘಫಾರಿ, 2020ರ ಜೂನ್ ನಲ್ಲಿ ಐಸಿಸ್‌–ಕೆ ನಾಯಕನಾಗಿ ನೇಮಕಗೊಂಡಿದ್ದ. ಇದರ ಎಲ್ಲಾ ಚಟುವಟಿಕೆಯನ್ನು ರೂಪಿಸುವ, ಅನುಮೋದಿಸುವ ಜತೆಗೆ ಹಣಕಾಸಿನ ವ್ಯವಸ್ಥೆ ಮಾಡುತ್ತಿದ್ದಾನೆ ಎಂದು ಅಮೆರಿಕದ ರಿವಾರ್ಡ್‌ ಫಾರ್‌ ಜಸ್ಟೀಸ್ (ಆರ್‌ಎಫ್‌ಜೆ) ಇಲಾಖೆಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT