ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಪ್ರಯಾಣಿಸುವ ಅಮೆರಿಕನ್ನರಿಗೆ ‘ಲೆವೆಲ್‌ ಒನ್‌’ ಪ್ರಯಾಣ ಸಲಹೆ ಪ್ರಕಟಣೆ

Last Updated 16 ನವೆಂಬರ್ 2021, 8:34 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತದಲ್ಲಿ ಕೋವಿಡ್‌ 19ರ ಪರಿಸ್ಥಿತಿ ಗಮನಾರ್ಹ ರೀತಿಯಲ್ಲಿ ಸುಧಾರಣೆ ಆಗಿರುವ ಕಾರಣ ಅಮೆರಿಕದ ‘ಸೆಂಟರ್ಸ್‌ ಫಾರ್‌ ಡಿಸೀಸ್‌ ಅಂಡ್‌ ಪ್ರಿವೆನ್ಷನ್‌’ (ಸಿಡಿಸಿ), ಭಾರತಕ್ಕೆ ಪ್ರಯಾಣಿಸುವ ಅಮೆರಿಕನ್ನರಿಗೆ ‘ಲೆವೆಲ್‌ ಒನ್‌’ಸೂಚನೆ ನೀಡಿ, ಹೊಸ ಪ್ರಯಾಣ ಸಲಹೆಯನ್ನು ಸೋಮವಾರ ಪ್ರಕಟಿಸಿದೆ.

ಎಫ್‌ಡಿಎ ಮಾನ್ಯ ಮಾಡಿರುವ ಅಧಿಕೃತ ಲಸಿಕೆಯನ್ನು ಪೂರ್ಣವಾಗಿ ಪಡೆದಿದ್ದರೆ ಕೋವಿಡ್‌ 19ರ ರೋಗ ಲಕ್ಷಣಗಳು ವೃದ್ಧಿಸುವ ಅಪಾಯ ಕಡಿಮೆ. ಹಾಗಾಗಿ ಭಾರತಕ್ಕೆ ತೆರಳುವ ಮುನ್ನ ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆದಿರಬೇಕು. ಅಲ್ಲದೆ ಭಾರತ ಪ್ರವೇಶಿಸಿದ ಬಳಿಕ ಮಾಸ್ಕ್‌ ಹಾಕಿಕೊಳ್ಳುವುದು, ಇತರರಿಂದ ಆರು ಅಡಿ ಅಂತರ ಕಾಯ್ದುಕೊಳ್ಳುವುದೂ ಸೇರಿದಂತೆ ಆರೋಗ್ಯ ಇಲಾಖೆ ಹೊರಡಿಸಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಿಡಿಸಿ ಸೂಚಿಸಿದೆ.

ಆಗಸ್ಟ್‌ನಲ್ಲಿ ಅಮೆರಿಕವು ಭಾರತಕ್ಕೆ ಪ್ರಯಾಣಿಸುವವರಿಗೆ ‘ಲೆವೆಲ್‌ 2’ ಸೂಚನೆ ನೀಡುವ ಮೂಲಕ ಪ್ರಯಾಣವನ್ನು ಸರಾಗಗೊಳಿಸಿತ್ತು.

ಈ ವರ್ಷದ ಆರಂಭದಲ್ಲಿ ಕೋವಿಡ್‌ ಎರಡನೇ ಅಲೆ ವ್ಯಾಪಕವಾಗಿದ್ದ ಕಾರಣ ಭಾರತಕ್ಕೆ ಪ್ರಯಾಣಿಸದಂತೆ ತನ್ನ ನಾಗರಿಕರಿಗೆ ಅಮೆರಿಕ ‘ಲೆವೆಲ್‌–4’ರ ಪ್ರಯಾಣ ಸಲಹಾ ಸೂಚನೆ ನೀಡಿತ್ತು.

‘ಲೆವೆಲ್‌ 1’ ಎಂದರೆ ಒಂದು ದೇಶಕ್ಕೆ ತೆರಳುವುದು ಸುರಕ್ಷಿತ ಎಂಬ ಸಂಕೇತವಾಗಿದ್ದರೆ, ‘ಲೆವೆಲ್‌ 4’ ಎಂದರೆ ಅಪಾಯವಿದೆ, ದೇಶಕ್ಕೆ ತೆರಳಲೇಬೇಡಿ ಎಂಬುದನ್ನು ಸಂಕೇತಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT