ಶನಿವಾರ, ಅಕ್ಟೋಬರ್ 1, 2022
20 °C

ತೈವಾನ್‌ಗೆ ಅಮೆರಿಕದ ಮತ್ತೊಂದು ಉನ್ನತ ನಿಯೋಗ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೈಪೆ (ಎಎಫ್‌ಪಿ): ತೈವಾನ್‌ಗೆ ಅಮೆರಿಕ ಸಂಸತ್‌ನ ಆರು ಸದಸ್ಯರ ನಿಯೋಗ ಭಾನುವಾರ ಬಂದಿಳಿದಿದೆ. 

ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಅವರು ಇತ್ತೀಚೆಗೆ ತೈಪೆಗೆ ಬಂದು ಹೋದ ನಂತರ ವ್ಯಗ್ರಗೊಂಡಿರುವ ಚೀನಾ, ದ್ವೀಪದ ಸುತ್ತಲೂ ಸಮರಾಭ್ಯಾಸಕ್ಕಿಳಿದು, ಅಗತ್ಯಬಿದ್ದರೆ ದ್ವೀಪದ ಸ್ವಾಧೀನಕ್ಕೆ ಸೇನಾ ಬಲ ಬಳಸುವ ಬೆದರಿಕೆ ಹುಟ್ಟಿಸಿದ್ದರೂ ಇದಕ್ಕೆ ಸೊಪ್ಪು ಹಾಕದೆ, ಅಮೆರಿಕ ಮತ್ತೊಂದು ಉನ್ನತ ನಿಯೋಗವನ್ನು ತನ್ನ ಮಿತ್ರ ರಾಷ್ಟ್ರಕ್ಕೆ ಕಳುಹಿಸಿದೆ.

ಇದೇ ವೇಳೆ ಪ್ರಚೋದನಾಕಾರಿ ನಡೆ ಮುಂದುವರಿಸಿರುವ ಚೀನಾದ 22 ಯುದ್ಧ ವಿಮಾನಗಳು ಮತ್ತು ಆರು ಸಮರನೌಕೆಗಳು ತೈವಾನ್‌ಗೆ ಸೇರಿದ ಪ್ರದೇಶದಲ್ಲಿ ಸಂಚರಿಸಿವೆ ಎಂದು ತೈವಾನ್ ರಕ್ಷಣಾ ಸಚಿವಾಲಯ ಭಾನುವಾರ ಹೇಳಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು