ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ 'ಕೋವಿಡ್‌'ನಿಂದ ಸತ್ತವರ ಸಂಖ್ಯೆ ಸುಮಾರು 5 ಲಕ್ಷ!

Last Updated 22 ಫೆಬ್ರುವರಿ 2021, 6:12 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದಲ್ಲಿ ‘ಕೋವಿಡ್‌ 19‘ ಸಾಂಕ್ರಾಮಿಕದಿಂದ ಸತ್ತವರ ಸಂಖ್ಯೆ 5 ಲಕ್ಷ ತಲುಪುತ್ತಿದೆ.

ಕೋವಿಡ್‌ ಸಾಂಕ್ರಾಮಿಕ ಆವರಿಸಿ ಒಂದು ವರ್ಷ ಕಳೆದಿದೆ. ಈ ಸೋಂಕಿಗೆ 4,98,000 ಜೀವಗಳು ಬಲಿಯಾಗಿವೆ. ಈ ಸಂಖ್ಯೆ ಅಂದಾಜು ಅಮೆರಿಕದ ಮಿಸ್ಸೂರಿಯ ಕಾನ್ಸಾಸ್ ನಗರದ ಜನಸಂಖ್ಯೆಗೆ ಸಮಾನವಾದದ್ದು. ಹೆಚ್ಚು ಕಡಿಮೆ ಅಟ್ಲಾಂಟಾದಷ್ಟೇ ಗಾತ್ರದ ಪ್ರದೇಶವಿದು. ಈ ಪ್ರಮಾಣದ ಸಾವುಗಳು ನಿಜಕ್ಕೂ ಆತಂಕಕಾರಿ.

ಜಾನ್ಸ್‌ ಹಾಪ್ಕಿನ್ಸ್‌ ವಿಶ್ವವಿದ್ಯಾಲಯ ಸಂಗ್ರಹಿಸಿದ ಈ ಅಂಕಿ– ಅಂಶಗಳು, 2019ರಲ್ಲಿ ದೀರ್ಘಕಾಲದಿಂದ ಉಸಿರಾಟದ ಸಮಸ್ಯೆಗಳನ್ನು ಹೊಂದಿರುವವರು, ಪಾರ್ಶ್ವವಾಯು ಪೀಡಿತರು, ಅಲ್ಜಮೈರ್, ಜ್ವರ ಮತ್ತು ನ್ಯುಮೋನಿಯಾಗಳಿಂದ ಸಾವನ್ನಪ್ಪಿದವರ ಸಂಖ್ಯೆಯನ್ನೂ ಮೀರಿಸುತ್ತದೆ.

‘1918ರಲ್ಲಿ ಇನ್‌ಫ್ಲೂಯೆಂಜ ಸೋಂಕು ಹೊರತುಪಡಿಸಿದರೆ, ‌ಕಳೆದ 102 ವರ್ಷಗಳಲ್ಲಿ ಸೋಂಕಿನಿಂದ ಇಷ್ಟು ಪ್ರಮಾಣದಲ್ಲಿ ಸಾವನ್ನಪ್ಪಿದವರನ್ನು ದೇಶ ಕಂಡಿರಲಿಲ್ಲ‘ ಎಂದು ರಾಷ್ಟ್ರದ ಖ್ಯಾತ ಸೋಂಕು ರೋಗ ತಜ್ಞ ಡಾ. ಆಂಥೊನಿ ಫೌಸಿ ‘ಸಿಎನ್‌ಎನ್‌ ‘ಸ್ಟೇಟ್ ಆಫ್ ದಿ ಯೂನಿಯನ್‌‍‘ನಲ್ಲಿ ತಿಳಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ, ಈ ವರ್ಷದ ಜನವರಿ 19ರವರೆಗಿನ ಅಂಕಿ ಅಂಶಗಳ ಪ್ರಕಾರ, ಅಮೆರಿಕದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 4 ಲಕ್ಷ ತಲುಪಿತ್ತು.

ಅಮೆರಿಕದಲ್ಲಿ ಕೊರೊನಾ ಸೋಂಕಿನಿಂದ ಮೊದಲ ಸಾವು ಸಂಭವಿಸಿದ್ದು ಫೆಬ್ರವರಿ 2020ರ ಆರಂಭದಲ್ಲಿ. ಕ್ಯಾಲಿಫೋರ್ನಿಯಾದ ಸಾಂತಾ ಕ್ಲಾರಾ ಕೌಂಟಿಯಲ್ಲಿ ಈ ಸೋಂಕಿನಿಂದ ಇಬ್ಬರು ಮೃತಪಟ್ಟರು. ಅದಾದ ಮೇಲೆ, ನಾಲ್ಕು ತಿಂಗಳ ನಂತರ 1 ಲಕ್ಷ ಮಂದಿ ಸಾವನ್ನಪ್ಪಿದರು. ಸೆಪ್ಟೆಂಬರ್‌ ತಿಂಗಳಲ್ಲಿ ಈ ಸಾವಿನ ಪ್ರಮಾಣ 2 ಲಕ್ಷ ಮತ್ತು ಡಿಸೆಂಬರ್‌ನಲ್ಲಿ 3 ಲಕ್ಷಕ್ಕೆ ತಲುಪಿತು. ಆದರೆ, ಒಂದೇ ತಿಂಗಳಲ್ಲಿ ಸಾವಿನ ಸಂಖ್ಯೆ 3 ಲಕ್ಷದಿಂದ 4 ಲಕ್ಷಕ್ಕೆ ಏರಿತು. ಆ ನಂತರದ ಎರಡು ತಿಂಗಳಲ್ಲಿ ಸಾವಿನ ಸಂಖ್ಯೆ 4 ಲಕ್ಷದಿಂದ 5 ಲಕ್ಷದ ಅಂಚಿಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT