ಮಂಗಳವಾರ, ಸೆಪ್ಟೆಂಬರ್ 28, 2021
20 °C
ಸುದ್ದಿಗೋಷ್ಠಿಯಲ್ಲಿ ವಿದೇಶಾಂಗ ಇಲಾಖೆಯ ವಕ್ತಾರ ನೆಡ್‌ಪ್ರೈಸ್‌

ವಿಶ್ವಸಂಸ್ಥೆ ಭದ್ರತಾ ಮಂಡಳಿ ವಿಸ್ತರಣೆಗೆ ಅಮೆರಿಕದ ಬೆಂಬಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಗೆ ಭಾರತ ಒತ್ತು ನೀಡುತ್ತಿರುವ ನಡುವೆಯೇ ಅಮೆರಿಕ, ಭದ್ರತಾ ಮಂಡಳಿಯನ್ನು ಶಾಶ್ವತ ಮತ್ತು ಶಾಶ್ವತ ಸದಸ್ಯರಲ್ಲದವರಿಗಾಗಿ ವಿಸ್ತರಿಸಲು ಒಮ್ಮತ ಮೂಡಿಸುವುದನ್ನು ಬೆಂಬಲಿಸುವುದಾಗಿ ಹೇಳಿದೆ.

ಇದೇ ವೇಳೆ ಸದಸ್ಯ ರಾಷ್ಟ್ರಗಳಿಗಿರುವ ವೀಟೊ ಅಧಿಕಾರವನ್ನು ವಿಸ್ತರಣೆ ಅಥವಾ ಬದಲಾವಣೆ ಮಾಡುವುದಿಲ್ಲ. ಹಾಗೆಯೇ, ಭದ್ರತಾ ಮಂಡಳಿಗಿರುವ ಪರಿಣಾಮಕಾರಿ ಶಕ್ತಿಯನ್ನು ಕುಗ್ಗಿಸುವುದಿಲ್ಲ ಎಂದು ಅಮೆರಿಕ ತಿಳಿಸಿದೆ.

ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ನೆಡ್‌ಪ್ರೈಸ್ ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದರು.

‘ಶಾಶ್ವತ ಮತ್ತು ಶಾಶ್ವತವಲ್ಲದ ಸದಸ್ಯರಿಗಾಗಿ ಭದ್ರತಾ ಮಂಡಳಿ ವಿಸ್ತರಿಸುವ ಕುರಿತ ವಿಷಯದಲ್ಲಿ ಒಮ್ಮತ ಮೂಡಿಸುವುದನ್ನು  ಅಮೆರಿಕ ಬೆಂಬಲಿಸುತ್ತದೆ. ಆದರೆ, ಯಾವ ಕಾರಣಕ್ಕೂ ಭದ್ರತಾ ಮಂಡಳಿಯ ಪರಿಣಾಮಕಾರಿತ್ವವನ್ನು ಕಡಿಮೆ ಮಾಡುವುದಿಲ್ಲ. ಹಾಗೆಯೇ, ವೀಟೊ ಅಧಿಕಾರವನ್ನು ಬನಲಾಯಿಸುವುದಿಲ್ಲ ಅಥವಾ ವಿಸ್ತರಿಸುವುದೂ ಇಲ್ಲ‘ ಎಂದು ಸ್ಪಷ್ಟಪಡಿಸಿದರು.

ಭಾರತ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರವಾಗುವ ಕುರಿತು ಅಧ್ಯಕ್ಷ ಜೋ ಬೈಡನ್ ಆಡಳಿತ ಯೋಚಿಸುತ್ತಿದೆಯೇ ಎಂಬ ಪ್ರಶ್ನೆಗೆ ಅವರು, ಆ ರೀತಿ ಉತ್ತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು