ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಕೋವಿಡ್ ಪಾಸಿಟಿವ್ ಮಗನನ್ನು ಕಾರಿನ ಡಿಕ್ಕಿಯೊಳಗೆ ಕೂರಿಸಿದ್ದ ತಾಯಿ ಬಂಧನ

Last Updated 8 ಜನವರಿ 2022, 10:45 IST
ಅಕ್ಷರ ಗಾತ್ರ

ಟೆಕ್ಸಾಸ್‌: ಕೋವಿಡ್ ಪಾಸಿಟಿವ್ ಮಗನಿಂದ ತನ್ನನ್ನು ರಕ್ಷಿಸಿಕೊಳ್ಳಲು ಆತನನ್ನು ಕಾರಿನ ಡಿಕ್ಕಿಯೊಳಗೆ ಲಾಕ್ ಮಾಡಿ ಮಗುವನ್ನು ಅಪಾಯಕ್ಕೆ ಸಿಲುಕಿಸಿದ ಆರೋಪದ ಮೇಲೆ ಅಮೆರಿಕದ ಟೆಕ್ಸಾಸ್‌ನಲ್ಲಿ ಶಿಕ್ಷಕಿಯೊಬ್ಬರನ್ನು ಬಂಧಿಸಲಾಗಿದೆ.

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, 41 ವರ್ಷದ ಸಾರಾ ಬೀಮ್ ಎನ್ನುವವರು ತನ್ನ ಮಗನಿಗೆ ಕೋವಿಡ್ ಪಾಸಿಟಿವ್ ಆದ ಬಳಿಕ ಮತ್ತೊಂದು ಪರೀಕ್ಷೆಯನ್ನು ನಡೆಸಲು ಹ್ಯಾರಿಸ್ ಕಂಟ್ರಿಗೆ ತೆರಳುವಾಗ ಜ. 3 ರಂದು ಮಗನನ್ನು ಕಾರಿನ ಡಿಕ್ಕಿಯೊಳಗೆ ಕೂರಿಸಿ ಕರೆದೊಯ್ಯುತ್ತಿದ್ದರು.

ಘಟನೆ ಬಗ್ಗೆ click2houston.com ಜೊತೆಗೆ ಮಾತನಾಡಿರುವ ಪ್ರತ್ಯಕ್ಷದರ್ಶಿ, ಡಿಕ್ಕಿಯಿಂದ ಬರುತ್ತಿದ್ದ ಧ್ವನಿಗಳನ್ನು ಕೇಳಿ ಶಿಕ್ಷಕಿಯನ್ನು ವಿಚಾರಿಸಿ ಡಿಕ್ಕಿಯನ್ನು ತೆರೆದಾಗ ಒಳಗೆ ಮಲಗಿದ್ದ ಹುಡುಗ ಪತ್ತೆಯಾಗಿದ್ದಾನೆ ಎಂದಿದ್ದಾರೆ.

click2houston.com ಪ್ರಕಾರ, ಬೀಮ್, ತನ್ನ 13 ವರ್ಷದ ಮಗನಿಗೆ ಕೊರೊನಾ ಸೋಂಕು ತಗುಲಿದ್ದ ಕಾರಣ ತಾನು ಸೋಂಕಿನಿಂದ ತಪ್ಪಿಸಿಕೊಳ್ಳಲು ಆತನನ್ನು ಡಿಕ್ಕಿಯೊಳಗೆ ಲಾಕ್ ಮಾಡಿದ್ದು, ಫಲಿತಾಂಶವನ್ನು ಖಚಿತಪಡಿಸಿಕೊಳ್ಳಲು ಆಕೆ ಮತ್ತೊಮ್ಮೆ ಮಗನನ್ನು ಪರೀಕ್ಷೆಗೆ ಕರೆದೊಯ್ಯುತ್ತಿದ್ದದ್ದಾಗಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಕೆಟಿಆರ್‌ಕೆ-ಟಿವಿ ಪ್ರಕಾರ, ಹುಡುಗನನ್ನು ಕಾರಿನ ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳಲು ಅನುಮತಿ ನೀಡುವವರೆಗೆ ಯಾವುದೇ ಪರೀಕ್ಷೆಯನ್ನು ಮಾಡಲಾಗುವುದಿಲ್ಲ ಎಂದು ಪರೀಕ್ಷಾ ಸ್ಥಳದಲ್ಲಿದ್ದ ಆರೋಗ್ಯ ಕಾರ್ಯಕರ್ತರು ಬೀಮ್‌ಗೆ ತಿಳಿಸಿದ್ದಾರೆ.

'ಈ ವಾರದ ಆರಂಭದಲ್ಲಿ ಕೋವಿಡ್-19 ಪರೀಕ್ಷಾ ಕೇಂದ್ರದಲ್ಲಿ ಮಗುವು ಕಾರಿನ ಡಿಕ್ಕಿಯಲ್ಲಿರುವುದಾಗಿ ಸಿಎಫ್‌ಪಿಡಿಗೆ ಮಾಹಿತಿ ನೀಡಲಾಯಿತು. ಕಾನೂನು ಜಾರಿ ನಿರ್ದೇಶನಾಲಯವು ಸಂಪೂರ್ಣ ತನಿಖೆ ನಡೆಸಿ ಮಹಿಳೆಯ ಬಂಧನಕ್ಕೆ ವಾರಂಟ್ ಜಾರಿ ಮಾಡಿತು. ಅದೃಷ್ಟವಶಾತ್, ಮಗುವಿಗೆ ಯಾವುದೇ ಗಾಯವಾಗಿಲ್ಲ' ಎಂದು ಪೊಲೀಸ್ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT