ಗುರುವಾರ , ಅಕ್ಟೋಬರ್ 29, 2020
19 °C

ಅಮೆರಿಕ ವಾಸ: ಚೀನಾದಪತ್ರಕರ್ತರಿಗೆ 90 ದಿನದ ಮಿತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ಚೀನಾದ ಪತ್ರಕರ್ತರು ಇನ್ನು ಮುಂದೆ ಅಮೆರಿಕದಲ್ಲಿ ಗರಿಷ್ಠ 90 ದಿನಗಳಷ್ಟೇ ಉಳಿಯಬಹುದು. ಆಡಳಿತ ಬಯಸಿದರೆ ಇಷ್ಟೇ ಅವಧಿಗೆ ಮತ್ತೊಮ್ಮೆ ವಿಸ್ತರಣೆಗೆ ಅವಕಾಶ ಇರುವಂತೆ ಅಮೆರಿಕ ಆಡಳಿತ ಅಧಿಸೂಚನೆ ಹೊರಡಿಸಿದೆ.

ಆಂತರಿಕ ಭದ್ರತೆ ಇಲಾಖೆಯು ವಿದೇಶಿ ಪತ್ರಕರ್ತರು, ವಿದ್ಯಾರ್ಥಿಗಳು, ಸಂಶೋಧಕರು ಅಮೆರಿಕದಲ್ಲಿ ಉಳಿಯಲು ಇರುವ ಗರಿಷ್ಠ ಕಾಲಮಿತಿ ನಿಗದಿಪಡಿಸುವಂತೆ ಪ್ರಸ್ತಾವ ನೀಡಿತ್ತು.

ಪತ್ರಕರ್ತರಿಗೆ ಅನ್ವಯವಾಗುವಂತೆ ಸಾಮಾನ್ಯವಾಗಿ 240 ದಿನಗಳ ಅವಕಾಶವಿದ್ದು, ಇಷ್ಟೇ ಅವಧಿಗೆ ಮತ್ತೆ ವಿಸ್ತರಿಸಲು ಅವಕಾಶವಿದೆ. ಆದರೆ, ಚೀನಾದ ಪತ್ರಕರ್ತರಿಗೆ ಅನ್ವಯವಾಗುವಂತೆ ಈ ಮಿತಿಯನ್ನು 90 ದಿನಗಳಿಗೆ ನಿಗದಿಪಡಿಸಲಾಗಿದೆ.

ಭಾಗಿದಾರರು ಈ ಅಧಿಸೂಚನೆಗೆ ಸಂಬಂಧಿಸಿ ಪ್ರತಿಕ್ರಿಯೆ ದಾಖಲಿಸಲು 30 ದಿನಗಳ ಅವಕಾಶ ಕಲ್ಪಿಸಲಾಗಿದೆ. ಚೀನಾ ಮತ್ತು ಹಾಂಗ್‌ಕಾಂಗ್‌ ಪಾಸ್ ಪೋರ್ಟ್ ಆಧರಿಸಿ 'ಐ' ವೀಸಾ ನೀಡಲಿದ್ದು, ಇದು ವಿದೇಶಿ ಪತ್ರಕರ್ತರಿಗೆ ಅನ್ವಯ ಆಗುವಂತದ್ದಾಗಿದೆ.

ಮಕಾವ್ ವಿಶೇಷ ಆಡಳಿತ ವಲಯ ನೀಡಲಿರುವ ಪಾಸ್ ಪೋರ್ಟ್ ಹೊಂದಿದವರಿಗೆ ವಿನಾಯಿತಿ ಇದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು