ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಜನಸಂಖ್ಯೆಯಲ್ಲಿ ಕಳೆದ ವರ್ಷ ಶೇ 0.35ರಷ್ಟು ಹೆಚ್ಚಳ

ಹೆಚ್ಚಳ ಪ್ರಮಾಣ 120 ವರ್ಷಗಳಲ್ಲಿಯೇ ಅತಿ ಕಡಿಮೆ
Last Updated 23 ಡಿಸೆಂಬರ್ 2020, 10:27 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಕಳೆದ ಜುಲೈನಿಂದ ಈ ವರ್ಷದ ಜುಲೈ ವರೆಗಿನ ಅವಧಿಯಲ್ಲಿ ಅಮೆರಿಕದ ಜನಸಂಖ್ಯೆಯಲ್ಲಿ ಶೇ 0.35 ರಷ್ಟು ಹೆಚ್ಚಳ ಕಂಡು ಬಂದಿದೆ.

ಜನಸಂಖ್ಯೆಯಲ್ಲಿನ ಹೆಚ್ಚಳ ಪ್ರಮಾಣವನ್ನು ಪರಿಗಣಿಸಿದರೆ, ಇದು ಕಳೆದ 120 ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ಎಂದು ಅಮೆರಿಕದ ಸೆನ್ಸಸ್‌ ಬ್ಯುರೋ ಹೇಳಿದೆ.

ಪ್ರಸಕ್ತ ವರ್ಷದಲ್ಲಿ ಕೋವಿಡ್‌–19 ಪಿಡುಗಿನ ಪರಿಣಾಮ ಸಾಕಷ್ಟು ಜೀವ ಹಾನಿಯಾಗಿದೆ ಎಂಬುದರ ಮೇಲೆ ಬ್ಯುರೋ ಬಿಡುಗಡೆ ಮಾಡಿರುವ ವರದಿ ಬೆಳಕು ಚೆಲ್ಲುತ್ತದೆ.

‘ವಲಸೆ ಬರುವವರ ಮೇಲೆ ನಿರ್ಬಂಧ ಹೇರಿರುವುದು, ಇಲ್ಲಿನವರಲ್ಲಿ ಸಂತಾನೋತ್ಪತ್ತಿ ಶಕ್ತಿ ಕುಂದಿರುವುದು ಜನಸಂಖ್ಯೆಯ ಪ್ರಮಾಣದಲ್ಲಿ ಇಳಿಕೆಗೆ ಕಾರಣ. ಅದರಲ್ಲೂ ಈ ವರ್ಷ ಕೋವಿಡ್‌–19 ನಿಂದ ಸಂಭವಿಸಿದ ಸಾವುಗಳು ಸಹ ಜನಸಂಖ್ಯೆ ಹೆಚ್ಚಳದ ಮೇಲೆ ಪರಿಣಾಮ ಬೀರಿವೆ’ ಎಂದು ಬ್ರೂಕಿಂಗ್‌ ಇನ್‌ಸ್ಟಿಟ್ಯೂಟ್‌ನ ಮೆಟ್ರೊಪಾಲಿಟನ್‌ ಪಾಲಿಸಿ ಪ್ರೋಗ್ರಾಂನ ಸಂಶೋಧಕ ವಿಲಿಯಂ ಫ್ರೇ ವಿಶ್ಲೇಷಿಸುತ್ತಾರೆ.

ಜನಸಂಖ್ಯೆಯಲ್ಲಿ ಶೇ 0.35ರಷ್ಟು ಹೆಚ್ಚಳವೆಂದರೆ, ಕಳೆದ ಜುಲೈನಿಂದ ಈ ವರ್ಷದ ಜುಲೈ ವರೆಗೆ 10 ಲಕ್ಷ ಜನರು ಹೆಚ್ಚಳವಾಗಿದ್ದಾರೆ. ಇದು ಈ ಶತಮಾನ ಮಾತ್ರವಲ್ಲ, ಈ ಹಿಂದಿನ ಶತಮಾನದಲ್ಲಿ ಜನಸಂಖ್ಯೆ ಪ್ರಮಾಣದಲ್ಲಿ ಕಂಡು ಬಂದ ಅತ್ಯಂತ ಕಡಿಮೆ ಹೆಚ್ಚಳ ಎಂದು ಫ್ರೇ ಹೇಳುತ್ತಾರೆ.

ಇನ್ನು, ಭೌಗೋಳಿಕವಾಗಿ ಅವಲೋಕಿಸಿದಾಗ, ಅಮೆರಿಕದ ಈಶಾನ್ಯ ಹಾಗೂ ಮಧ್ಯಭಾಗದಲ್ಲಿ ಜನಸಂಖ್ಯೆಯಲ್ಲಿನ ಕುಸಿದ ಪ್ರಮಾಣ ಕಡಿಮೆ ಕಂಡು ಬರುತ್ತದೆ. ದಕ್ಷಿಣ ಹಾಗೂ ಪಶ್ಚಿಮ ಭಾಗಗಳಲ್ಲಿ ಈ ಪ್ರಮಾಣ ತುಸು ಹೆಚ್ಚು ಎಂದು ವರದಿಗಳು ಹೇಳುತ್ತವೆ.

1918–1919ರಲ್ಲಿ ಸ್ಪ್ತಾನಿಷ್‌ ಫ್ಲೂನಿಂದ ಅಮೆರಿಕ ತತ್ತರಿಸಿತ್ತು. ಅದೇ ಅವಧಿಯಲ್ಲಿ ಅಮೆರಿಕದ ಸೇನಾಪಡೆಗಳು ಮೊದಲ ಜಾಗತಿಕ ಯುದ್ಧದ ಕಾರಣ ವಿವಿಧೆಡೆ ನಿಯೋಜನೆಗೊಂಡಿದ್ದವು. ಆದರೆ, ಆ ವರ್ಷ ಜನಸಂಖ್ಯೆಯಲ್ಲಿನ ಹೆಚ್ಚಳದ ಪ್ರಮಾಣ ಶೇ 0.49ರಷ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT