ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕೊರಿಯಾ, ಅಮೆರಿಕದಿಂದ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ

Last Updated 6 ಜೂನ್ 2022, 12:43 IST
ಅಕ್ಷರ ಗಾತ್ರ

ಸೋಲ್‌ (ಎ.ಪಿ): ಸಾಮರ್ಥ್ಯ ಪ್ರದರ್ಶನದ ಭಾಗವಾಗಿ ಅಮೆರಿಕ ಮತ್ತು ದಕ್ಷಿಣ ಕೊರಿಯಾದ ಸೇನೆ ಸೋಮವಾರ ಸಮುದ್ರಕ್ಕೆ ಪ್ರಯೋಗಾರ್ಥವಾಗಿ ಎಂಟು ಖಂಡಾಂತರ ಕ್ಷಿಪಣಿಗಳ ಪ್ರಯೋಗ ನಡೆಸಿದವು. ಉತ್ತರ ಕೊರಿಯಾ ಭಾನುವಾರವಷ್ಟೇ ತನ್ನ ಶಸ್ತ್ರಾಸ್ತ್ರಗಳ ಪ್ರದರ್ಶನ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಈ ಕ್ಷಿಪಣಿಗಳ ಪ್ರಯೋಗ ನಡೆದಿದೆ ಎಂದು ಹೇಳಲಾಗಿದೆ.

ದಕ್ಷಿಣ ಕೊರಿಯಾ ಸೇನಾಬಲಗಳ ಜಂಟಿ ಮುಖ್ಯಸ್ಥರು ಈ ಕುರಿತು, ಎಂಟು ಕ್ಷಿಪಣಿಗಳ ಪ್ರಯೋಗವನ್ನು 10 ನಿಮಿಷದಲ್ಲಿ ನಡೆಸಲಾಗಿದೆ. ಉತ್ತರ ಕೊರಿಯಾ ದಾಳಿ ಸಂದರ್ಭದಲ್ಲಿ ಕ್ಷಿಪ್ರ ಮತ್ತು ನಿಖರವಾಗಿ ಪ್ರತಿಕ್ರಿಯಿಸುವ ಸಾಮರ್ಥ್ಯದ ಪ್ರದರ್ಶನ ಇದರ ಉದ್ದೇಶವಾಗಿತ್ತು ಎಂದು ಹೇಳಿದರು.

ಉತ್ತರ ಕೊರಿಯಾ ಭಾನುವಾರದಂದು ವಿವಿಧ ನಾಲ್ಕು ತಾಣಗಳಿಂದ 35 ನಿಮಿಷದಲ್ಲಿ ಕಡಿಮೆ ಅಂತರವನ್ನು ಗುರಿಯಾಗಿಸಿ ಪ್ರಯೋಗಿಸುವ ಎಂಟು ಕ್ಷಿಪಣಿಗಳ ಪರೀಕ್ಷಾರ್ಥ ಪ್ರಯೋಗ ನಡೆಸಿತ್ತು. 2022ರಲ್ಲಿ ಈ ಮೂಲಕ 18ನೇ ಬಾರಿ ಪ್ರಯೋಗ ನಡೆಸಿದಂತಾಗಿದೆ.

ಈ ಮಧ್ಯೆ, ದಕ್ಷಿಣ ಕೊರಿಯಾ, ಅಮೆರಿಕದ ಅಧಿಕಾರಿಗಳು, ‘ಉತ್ತರ ಕೊರಿಯಾ ಪ್ರಥಮ ಅಣುಶಕ್ತಿ ಪ್ರಯೋಗ ನಡೆಸಲು ಸಿದ್ಧತೆ ನಡೆಸಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT