ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ, ಹಾಂಗ್‌ಕಾಂಗ್‌ನ 24 ಅಧಿಕಾರಿಗಳ ಮೇಲೆ ನಿರ್ಬಂಧ ಹೇರಿದ ಅಮೆರಿಕ

Last Updated 17 ಮಾರ್ಚ್ 2021, 7:01 IST
ಅಕ್ಷರ ಗಾತ್ರ

ಹಾಂಗ್‌ಕಾಂಗ್‌: ರಾಷ್ಟ್ರೀಯ ಭದ್ರತಾ ಕಾಯ್ದೆ ಮೂಲಕ ಪ್ರಜಾಪ್ರಭುತ್ವ ಪರ ಹೋರಾಟ ಹತ್ತಿಕ್ಕುವುದನ್ನು ಚೀನಾ ಹಾಗೂ ಹಾಂಗ್‌ಕಾಂಗ್‌ ಮುಂದುವರಿಸಿರುವ ಕಾರಣ, ಉಭಯ ರಾಷ್ಟ್ರಗಳಿಗೆ ಸೇರಿದ 24 ಅಧಿಕಾರಿಗಳ ಮೇಲೆ ಅಮೆರಿಕ ನಿರ್ಬಂಧ ಹೇರಿದೆ.

‘ಹಾಂಗ್‌ಕಾಂಗ್‌ ಸ್ವಾಯತ್ತತೆ ಕಾಯ್ದೆ’ ಅಡಿ 24 ಪ್ರಮುಖ ಅಧಿಕಾರಿಗಳ ಮೇಲೆ ನಿರ್ಬಂಧ ಹೇರಿರುವುದನ್ನು ವಾಷಿಂಗ್ಟನ್‌ನಲ್ಲಿ ಮಂಗಳವಾರ ಘೋಷಿಸಲಾಯಿತು.

ಚೀನಾ ಕಮ್ಯುನಿಸ್ಟ್‌ ಪಾರ್ಟಿಯ ಪಾಲಿಟ್‌ ಬ್ಯುರೊ ಸದಸ್ಯ ವಾಂಗ್‌ ಚೆನ್‌, ಚೀನಾ ಸಂಸತ್‌ನ ಸ್ಥಾಯಿ ಸಮಿತಿಯಲ್ಲಿ ಹಾಂಗ್‌ಕಾಂಗ್‌ನ ಪ್ರತಿನಿಧಿಯಾಗಿರುವ ಟಾಮ್‌ ಯಿಯು–ಚುಂಗ್‌ ನಿರ್ಬಂಧಕ್ಕೆ ಒಳಗಾಗಿರುವ ಪ್ರಮುಖರು.

ಹಾಂಗ್‌ಕಾಂಗ್‌ನಲ್ಲಿ ಜಾರಿಗೊಳಿಸಿರುವ ವಿವಾದಾತ್ಮಕ ರಾಷ್ಟ್ರೀಯ ಭದ್ರತಾ ಕಾಯ್ದೆಯ ಕರಡನ್ನು ಟಾಮ್‌ ಯಿಯು–ಚುಂಗ್‌ ಸಿದ್ಧಪಡಿಸಿದ್ದಾರೆ.

‘ನ್ಯಾಷನಲ್‌ ಪೀಪಲ್ಸ್‌ ಕಾಂಗ್ರೆಸ್‌ (ಎನ್‌ಪಿಸಿ) ಮಾರ್ಚ್‌ 11ರಂದು ಏಕಪಕ್ಷೀಯವಾಗಿ ಕೈಗೊಂಡಿರುವ ನಿರ್ಧಾರದಿಂದ ಹಾಂಗ್‌ಕಾಂಗ್‌ನ ಚುನಾವಣಾ ವ್ಯವಸ್ಥೆ ದುರ್ಬಲಗೊಳ್ಳುವುದು. ಹೀಗಾಗಿ ಹಾಂಗ್‌ಕಾಂಗ್‌ ಸ್ವಾಯತ್ತತೆ ಕಾಯ್ದೆಯಡಿ ಹೇರಲಾಗಿರುವ ನಿರ್ಬಂಧವು ಎನ್‌ಪಿಸಿ ಕೈಗೊಂಡಿರುವ ನಿರ್ಧಾರದ ಬಗ್ಗೆ ನಮಗಿರುವ ಕಳವಳವನ್ನು ತೋರಿಸುತ್ತದೆ’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟೊನಿ ಬ್ಲಿಂಕೆನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಬ್ರಿಟನ್‌ ವಶದಲ್ಲಿದ್ದ ಹಾಂಗ್‌ಕಾಂಗ್‌ ಅನ್ನು 1997ರಲ್ಲಿ ಚೀನಾಕ್ಕೆ ಹಸ್ತಾಂತರ ಮಾಡಲಾಯಿತು. ಹಾಂಗ್‌ಕಾಂಗ್‌ಗೆ ಸಂಪೂರ್ಣ ಸ್ವಾಯತ್ತತೆ ನೀಡುವ ಭರವಸೆಯನ್ನು ಚೀನಾ ಆಗ ನೀಡಿತ್ತು. ಆದರೆ, ಎನ್‌ಪಿಸಿ ಈಗ ಕೈಗೊಂಡಿರುವ ನಿರ್ಧಾರದಿಂದ ಸ್ವಾಯತ್ತತೆ ನೀಡುವ ಭರವಸೆಯನ್ನು ಈಡೇರಿಸದಂತಾಗದು’ ಎಂದೂ ಬ್ಲಿಂಕೆನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT