ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀನಾಮೆ ಕೊಡಲ್ಲ: ಪಾಕ್‌ ಪ್ರಧಾನಿ

ಅವಿಶ್ವಾಸ ನಿರ್ಣಯ: ಅಧಿವೇಶನ ಭಾನುವಾರಕ್ಕೆ ಮುಂದೂಡಿಕೆ
Last Updated 31 ಮಾರ್ಚ್ 2022, 17:52 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ‘ಯಾವುದೇ ಕಾರಣಕ್ಕೂ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಅವಿಶ್ವಾಸ ನಿರ್ಣಯವನ್ನು ಎದುರಿಸುತ್ತೇನೆ. ಸೋಲನ್ನು ಒಪ್ಪಿಕೊಳ್ಳದೆ ಕೊನೆಯವರೆಗೂ ಹೋರಾಡುತ್ತೇನೆ’ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಯಾರೆಲ್ಲಾ ನಾಯಕರು ತಮ್ಮನ್ನು ಮಾರಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡುತ್ತೇನೆ ಎಂದು ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಪ್ರತಿಪಕ್ಷಗಳ ವಿರುದ್ಧ ಪರೋಕ್ಷ ಕಿಡಿಕಾರಿದ್ದಾರೆ.

ಈ ಸಂಬಂಧ ಗುರುವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, 'ನಾವು ಭಯ ಮತ್ತು ಹಣವನ್ನು ಆರಾಧಿಸುತ್ತಿದ್ದೇವೆ. ಮಾನವರಾದ ನಾವು ಇರುವೆಯಂತೆ ವರ್ತಿಸುತ್ತಿದ್ದೇವೆ. ಪಾಕಿಸ್ತಾನದ ಏಳು-ಬೀಳುಗಳನ್ನು ಕಂಡಿದ್ದೇನೆ. ನಾನು ಶಾಲಾ ವಿದ್ಯಾರ್ಥಿಯಾಗಿದ್ದಾಗ, ಪಾಕಿಸ್ತಾನ ಹೇಗಿರಬೇಕೆಂಬ ಉದಾಹರಣೆಯನ್ನು ಇತರೆ ದೇಶಗಳಿಗೆ ನೀಡಿತ್ತು. ಪಾಕಿಸ್ತಾನದ ಸಂಸ್ಥಾಪಕರು ಕನಸುಗಳನ್ನು ನನಸು ಮಾಡಲು ನಾನು ರಾಜಕೀಯಕ್ಕೆ ಬಂದಿದ್ದೇನೆ. ಪಾಕಿಸ್ತಾನವು ನನಗಿಂತ 5 ವರ್ಷವಷ್ಟೇ ಹಿರಿದು' ಎಂದು ಹೇಳಿದರು.

ಇನ್ನು 'ನನಗೆ ಭಾರತ ಮತ್ತು ಅಮೆರಿಕದಲ್ಲಿ ಹಲವು ಜನರು ಸ್ನೇಹಿತರಿದ್ದಾರೆ. ಆ ದೇಶಗಳ ಬಗ್ಗೆ ನನಗೇನು ತೊಂದರೆಯಿಲ್ಲ. ಆದರೆ ಅವರ ನೀತಿಗಳನ್ನು ಖಂಡಿಸುತ್ತೇನೆ' ಎಂದಿದ್ದಾರೆ.

ಒಟ್ಟು 342 ಸದಸ್ಯ ಬಲದ ಪಾಕಿಸ್ತಾನದ ಸಂಸತ್ತಿನಲ್ಲಿ ಇಮ್ರಾನ್ ಖಾನ್ ಅವರು ವಿಶ್ವಾಸ ಮತ ಗೆಲ್ಲಲು 172 ಸದಸ್ಯರ ಬೆಂಬಲ ಬೇಕಿದೆ. ಆದರೆ ತಮಗೆ 175 ಸಂಸದರ ಬೆಂಬಲವಿದೆ ಎಂದು ಹೇಳುತ್ತಿರುವ ಪ್ರತಿಪಕ್ಷವು, ತಕ್ಷ
ಣವೇ ಇಮ್ರಾನ್ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿದೆ.

ಅಧಿವೇಶನ ಮುಂದಕ್ಕೆ: ಇಮ್ರಾನ್ ಖಾನ್‌ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ಗುರುವಾರ ಸೇರಿದ್ದ ಪಾಕಿಸ್ತಾನದ ನ್ಯಾಷನಲ್‌ ಅಸೆಂಬ್ಲಿ ಅಧಿವೇಶನವನ್ನು ದಿಢೀರ್‌ ಭಾನುವಾರಕ್ಕೆ ಮುಂದೂಡಲಾಗಿದೆ.

ಇಮ್ರಾನ್ ವಿರುದ್ಧ ಮಂಡಿಸಿರುವ ಅವಿಶ್ವಾಸ ನಿರ್ಣಯವನ್ನು ತಕ್ಷಣವೇ ಮತಕ್ಕೆ ಹಾಕುವಂತೆವಿರೋಧ ಪಕ್ಷಗಳ ಸದಸ್ಯರು ಒತ್ತಾಯಿಸಿದರು. ಸದಸ್ಯರ ಗದ್ದಲದಿಂದ ಕಲಾಪವನ್ನು ಭಾನುವಾರಕ್ಕೆ ಮುಂದೂಡಲಾಗಿದೆ.

ಗುರುವಾರ ಸಂಸತ್ತಿನ ಕಲಾಪ ಆರಂಭವಾಗುತ್ತಿದ್ದಂತೆ ಉಪ ಸ್ಪೀಕರ್ ಖಾಸಿಂ ಸೂರಿ ಅವರು, ಕಾರ್ಯಕ್ರಮ ಪಟ್ಟಿಯಲ್ಲಿದ್ದ ವಿಚಾರದ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಟ್ಟರು. ಆದರೆ ಈ ವೇಳೆ ಪ್ರಧಾನಿ ಇಮ್ರಾನ್ ಖಾನ್ ಅವರ ವಿರುದ್ಧದ ಅವಿಶ್ವಾಸ ನಿರ್ಣಯ ಮೇಲಿನ ಮತದಾನಕ್ಕೆ ತಕ್ಷಣವೇ ಅವಕಾಶ ನೀಡಬೇಕು ಎಂದು ವಿರೋಧ ಪಕ್ಷದ ಸಂಸದರು ಒತ್ತಾಯಿಸಿದರು. ಅಲ್ಲದೆ ಸದಸ್ಯರು ಈ ಬಗ್ಗೆ ಗಟ್ಟಿ ಧ್ವನಿಯಲ್ಲಿ ಕೂಗಾಡಿ ಗದ್ದಲ ಉಂಟುಮಾಡಿದ್ದರಿಂದ ಕಲಾಪವನ್ನು ಉಪಸ್ಪೀಕರ್‌ ಅವರು ಭಾನುವಾರ ಬೆಳಗ್ಗೆ 11 ಗಂಟೆವರೆಗೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT