ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಂಕೆಯಲ್ಲೂ ಒಮೈಕ್ರಾನ್‌ ತಳಿ: ಅಮೆರಿಕ ವಿಜ್ಞಾನಿಗಳ ಶೋಧ

Last Updated 7 ಮಾರ್ಚ್ 2022, 13:02 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದಲ್ಲಿರುವ ಕೆಲವು ಜಿಂಕೆಗಳಲ್ಲೂ ಅತಿ ವೇಗವಾಗಿ ಹರಡಬಹುದಾದ ಕೊರೊನಾ ವೈರಸ್‌ನ ಒಮೈಕ್ರಾನ್ ತಳಿ ಪತ್ತೆಯಾಗಿದೆ ಎಂದು ಅಮೆರಿಕದ ಸಂಶೋಧಕರು ತಿಳಿಸಿದ್ದಾರೆ.

‘ದೇಹದ ಪ್ರತಿಕಾಯ ಶಕ್ತಿಗಳನ್ನು ತಟಸ್ಥಗೊಳಿಸುವ ಒಮೈಕ್ರಾನ್ ವೈರಸ್ ಜಿಂಕೆಗಳಲ್ಲೂ ಮನುಷ್ಯರ ರೀತಿಯಲ್ಲಿ ಮರುಸೋಂಕಿಗೆ ಕಾರಣವಾಗಲಿದೆ. ನಮ್ಮ ಈ ಅಧ್ಯಯನವು ಸೋಂಕಿನಿಂದ ಮತ್ತೊಂದು ಭೀತಿಯಿರುವುದನ್ನು ಸ್ಪಷ್ಟಪಡಿಸುತ್ತದೆ’ ಎಂದು ಪೆನ್ನ್ ಸ್ಟೇಟ್ ಸಹಾಯಕ ಸಂಶೋಧಕ ಪ್ರಾಧ್ಯಾಪಕ ಕುರ್ತ್ ವಂದೆಗ್ರಿಫ್ಟ್ ಹೇಳಿದ್ದಾರೆ.

ಕಳೆದ ವರ್ಷ ಅಮೆರಿಕದ ಐಒವಾದಲ್ಲಿ ಶೇ80ರಷ್ಟು ಜಿಂಕೆಗಳಲ್ಲಿ ಕೊರೊನಾ ವೈರಸ್ ಇರುವುದನ್ನು ಈ ಸಂಶೋಧಕರು ಪತ್ತೆ ಹಚ್ಚಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT