ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಸಿಗರಿಗೆ ವೀಸಾ: ದೇಶಗಳ ಆಧಾರದಲ್ಲಿದ್ದ ಮಿತಿ ರದ್ದು

ಮಸೂದೆ ಅಂಗೀಕರಿಸಿದ ಅಮೆರಿಕ ಸೆನೆಟ್‌
Last Updated 3 ಡಿಸೆಂಬರ್ 2020, 6:45 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಉದ್ಯೋಗ ಅರಸಿ ಅಮೆರಿಕಕ್ಕೆ ಬರುವವರಿಗೆ ವೀಸಾ ನೀಡುವಾಗ, ದೇಶಗಳ ಆಧಾರದಲ್ಲಿ ವೀಸಾ ಸಂಖ್ಯೆಗೆ ಹೇರಿದ್ದ ಮಿತಿಯನ್ನು ತೆಗೆದು ಹಾಕುವ ಮಸೂದೆಗೆ ಅಮೆರಿಕದ ಸೆನೆಟ್‌ ಸರ್ವಾನುಮತದ ಅಂಗೀಕಾರ ನೀಡಿದೆ. ಕುಟುಂಬ ಆಧರಿಸಿ ವೀಸಾ ನೀಡಲು ಈ ಮಸೂದೆ ಅವಕಾಶ ಕಲ್ಪಿಸಲಿದೆ.

ಇದರಿಂದ, ಅಮೆರಿಕದಲ್ಲಿ ನೆಲೆಸಿ,ಗ್ರೀನ್‌ ಕಾರ್ಡ್‌ ನಿರೀಕ್ಷೆಯಲ್ಲಿರುವ ಸಹಸ್ರಾರು ಜನ ಭಾರತೀಯರಿಗೆ ಅನುಕೂಲವಾಗಲಿದೆ. ಎಚ್‌–1ಬಿ ವೀಸಾದಡಿ ಅಮೆರಿಕದಲ್ಲಿರುವ ಭಾರತ ಮೂಲದ ಐಟಿ ಉದ್ಯೋಗಿಗಳು ಗ್ರೀನ್‌ ಕಾರ್ಡ್‌ಗಾಗಿ ದಶಕಗಳಿಂದ ಕಾಯುತ್ತಿದ್ದಾರೆ.

2019ರ ಜುಲೈ 10ರಂದು ಹೌಸ್‌ ಆಫ್‌ ರೆಪ್ರೆಸೆಂಟೇಟಿವ್‌ನಲ್ಲಿ ಈ ಮಸೂದೆಯನ್ನು ಅಂಗೀಕರಿಸಲಾಗಿತ್ತು. ಈ ಮೊದಲು, ವಿತರಣೆ ಮಾಡಲು ಲಭ್ಯವಿರುವ ಒಟ್ಟು ವೀಸಾಗಳ ಪೈಕಿ ಪ್ರತಿ ದೇಶಕ್ಕೆ ಶೇ 7ರಷ್ಟು ವೀಸಾಗಳನ್ನು ನೀಡಲು ಮಿತಿ ಹೇರಲಾಗಿತ್ತು. ಅಂಗೀಕೃತ ಮಸೂದೆಯಂತೆ ಈ ಮಿತಿಯನ್ನು ಶೇ 15ಕ್ಕೆ ಹೆಚ್ಚಳ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT