ಸೋಮವಾರ, ಜುಲೈ 4, 2022
23 °C

ತೈವಾನ್ ಸಾರ್ವಭೌಮ ದೇಶವೆಂದು ಪರಿಗಣಿಸಿ: ಪಾಂಪಿಯೊ ಸಲಹೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ತೈಪೆ: ತೈವಾನ್ ಅನ್ನು ಮುಕ್ತ ಮತ್ತು ಸಾರ್ವಭೌಮ ರಾಷ್ಟ್ರವೆಂದು ಪರಿಗಣಿಸಬೇಕು ಎಂದು ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಅವರು ಅಧ್ಯಕ್ಷ ಜೋ ಬೈಡೆನ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. 

ತೈವಾನ್ ವಿಚಾರವಾಗಿ ಅಮೆರಿಕ ಮತ್ತು ಚೀನಾ ಮಧ್ಯೆ ತಿಕ್ಕಾಟ ಹೆಚ್ಚಾಗುತ್ತಿರುವ ಹಾಗೂ ಬಲಿಷ್ಠ ರಷ್ಯಾ, ಉಕ್ರೇನ್ ಮೇಲೆ ದಾಳಿ ನಡೆಸಿರುವ  ನಡುವೆಯೇ ಪಾಂಪಿಯೊ ಅವರು ದ್ವೀಪ ರಾಷ್ಟ್ರ ತೈವಾನ್ ಪ್ರವಾಸ ಕೈಗೊಂಡಿದ್ದಾರೆ. ಈ ಸಂಬಂಧ ಪತ್ರಕರ್ತರ ಜತೆ ಮಾತನಾಡಿದ ಅವರು, ತೈವಾನ್ ಮೇಲಿನ ಚೀನಾದ ದಾಳಿಯು ಪಶ್ಚಿಮ ವಿಶ್ವದ ದೇಶಗಳು ಏನೆಲ್ಲಾ ಕ್ರಮ ಕೈಗೊಳ್ಳಲಿವೆ ಎಂಬುದರ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದ್ದಾರೆ.

‘ದೀರ್ಘ ಸಮಯದಿಂದ ನನೆಗುದಿಗೆ ಬಿದ್ದಿರುವ ತೈವಾನ್ ಅನ್ನು ತ್ವರಿತವಾಗಿ ಅಮೆರಿಕವು ಸಾರ್ವಭೌಮ ರಾಷ್ಟ್ರ ಎಂದು ಗುರುತಿಸಬೇಕು. ತನ್ಮೂಲಕ ತೈವಾನ್ ಅನ್ನು ಚೀನಾದ ರಿಪಬ್ಲಿಕ್ ದೇಶ ಎಂಬ ಹಣೆಪಟ್ಟಿಯನ್ನು ತೆಗೆಯಬೇಕು’ ಎಂದು ಹೇಳಿರುವ ಅವರು, ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಮಾಡಿರುವುದರಿಂದ ಇದೀಗ ತೈವಾನ್‌ ಸಹ ಚೀನಾದ ಬಗ್ಗೆ ಆತಂಕದಿಂದಲೇ ನೋಡುವಂತಾಗಿದೆ ಎಂದು ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು