ಅಮೆರಿಕದಾದ್ಯಂತ ರಾಜಕೀಯ ಪ್ರೇರಿತ ಸರ್ಕಾರಿ ವಿರೋಧಿ ಹಿಂಸಾಚಾರ ಸಾಧ್ಯತೆ

ವಾಷಿಂಗ್ಟನ್: ‘ಅಮೆರಿಕದಾದ್ಯಂತ ಧೀರ್ಘಕಾಲದವರೆಗೆ ರಾಜಕೀಯ ಪ್ರೇರಿತ ಸರ್ಕಾರಿ ವಿರೋಧಿ ಹಿಂಸಾಚಾರ ನಡೆಯುವ ಸಾಧ್ಯತೆ‘ ಎಂದು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಎಚ್ಚರಿಸಿದೆ.
ಈ ಕುರಿತು ‘ರಾಷ್ಟ್ರೀಯ ಭಯೋತ್ಪಾದನೆ ಪ್ರಕಟಣೆ‘ ಬಿಡುಗಡೆ ಮಾಡಿರುವ ಇಲಾಖೆ, ‘ಜನವರಿ 6ರಂದು ಕ್ಯಾಪಿಟಲ್ ಹಿಲ್ಸ್ ಮೇಲೆ ಟ್ರಂಪ್ ಬೆಂಬಲಿಗರಿಂದ ನಡೆದ ದಾಳಿ, ಉಗ್ರರನ್ನು ಹುರಿದುಂಬಿಸಬಹುದು ಮತ್ತು ಹೊಸ ದಾಳಿಗೆ ವೇದಿಕೆ ಕಲ್ಪಿಸಬಹುದು‘ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.
ಇಲಾಖೆ ಯಾವುದೇ ನಿರ್ದಿಷ್ಟ ಘಟನೆಗಳನ್ನು ಉಲ್ಲೇಖಿಸಿಲ್ಲ. ಆದರೆ, ದೇಶದಾದ್ಯಂತ ಇಂಥದ್ದೊಂದು ಭಯೋತ್ಪಾದಕ ಕೃತ್ಯದ ಸಾಧ್ಯತೆಯ ಬಗ್ಗೆ ಸೂಕ್ಷ್ಮವಾಗಿ ತಿಳಿಸಿದೆ.
ಆದರೆ, ಹಿಂಸಾಚಾರ ನಡೆಯಬಹುದಾದ ಸಾಧ್ಯತೆ ಹಾಗೂ ಅದನ್ನು ಎದುರಿಸಲು ಕಾನೂನು ವಿಭಾಗಕ್ಕೆ ಎಚ್ಚರಿಕೆ ನೀಡುವ ವಿಚಾರ ಸಾಮಾನ್ಯ ಸಂಗತಿಯಲ್ಲ ಎಂದು ಹೇಳಲಾಗುತ್ತಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.