ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೆಮನ್ ದಾಳಿ: ಯುಎಇಗೆ ಯುದ್ಧನೌಕೆ, ವಿಮಾನಗಳನ್ನು ಕಳುಹಿಸಲು ನಿರ್ಧರಿಸಿದ ಅಮೆರಿಕ

Last Updated 2 ಫೆಬ್ರುವರಿ 2022, 8:32 IST
ಅಕ್ಷರ ಗಾತ್ರ

ದುಬೈ: ಯೆಮನ್‌ನ ಹೂತಿ ಭಯೋತ್ಪಾದಕರು ಅರಬ್‌ ಸಂಯುಕ್ತ ಸಂಸ್ಥಾನದ (ಯುಎಇ) ಮೇಲೆ ಕ್ಷಿಪಣಿ ದಾಳಿಗೆ ಯತ್ನಿಸಿದ ಬಳಿಕ ಅಮೆರಿಕವು ಅರಬ್ ದೇಶಕ್ಕೆ ಯುದ್ಧನೌಕೆ ಹಾಗೂ ಯುದ್ಧ ವಿಮಾನಗಳನ್ನು ಕಳುಹಿಸಲು ಮುಂದಾಗಿದೆ.

ಯುಎಇಯಲ್ಲಿ ಕ್ಷಿಪಣಿ ನಿರೋಧಕವನ್ನು ಅಳವಡಿಸಲಾಗುವುದು ಮತ್ತು ಆ ದೇಶಕ್ಕೆ ಯುದ್ಧವಿಮಾನಗಳನ್ನು ಕಳುಹಿಸಿಕೊಡಲಾಗುವುದು ಎಂದು ಅಮೆರಿಕದ ಪ್ರಕಟಣೆ ತಿಳಿಸಿದೆ.

ಸದ್ಯದ ಬೆದರಿಕೆಯ ಹಿನ್ನೆಲೆಯಲ್ಲಿ ಯುಎಇಗೆ ನೆರವಾಗುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕುರಿತು ಯುಎಇ ಸರ್ಕಾರದ ಜತೆಗೆ ಮಾತುಕತೆ ನಡೆಸಲಾಗಿದೆ ಎಂದು ಅಮೆರಿಕ ಹೇಳಿದೆ.

ಯೆಮನ್‌ನ ಹೂತಿ ಭಯೋತ್ಪಾದಕರು ತನ್ನತ್ತ ಉಡಾವಣೆ ಮಾಡಿದ ಖಂಡಾಂತರ ಕ್ಷಿಪಣಿಯೊಂದನ್ನು ಹೊಡೆದುರುಳಿಸಲಾಗಿದೆ ಎಂದು ಯುಎಇ ರಕ್ಷಣಾ ಸಚಿವಾಲಯ ಸೋಮವಾರ ತಿಳಿಸಿತ್ತು. ಇಸ್ರೇಲ್‌ನ ಅಧ್ಯಕ್ಷ ಐಸಾಕ್‌ ಹೆರ್ಜಾಗ್ ಅವರ ಐತಿಹಾಸಿಕ ಭೇಟಿಯ ಬೆನ್ನಲ್ಲೇ ಈ ವಿದ್ಯಮಾನ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT