ಸೋಮವಾರ, ಸೆಪ್ಟೆಂಬರ್ 27, 2021
25 °C

ಲಸಿಕೆ ಉತ್ಪಾದಿಸುವ ಭಾರತ, ಇತರ ದೇಶಗಳಿಗೆ ಅಮೆರಿಕ ನೆರವು: ಬೈಡನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್ (ಪಿಟಿಐ): ಕೋವಿಡ್‌ ಲಸಿಕೆಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಭಾರತ ಮತ್ತು ಇತರ ದೇಶಗಳಿಗೆ ಲಸಿಕೆ ಉತ್ಪಾದನೆಗಾಗಿ ಅಮೆರಿಕ ಸಹಾಯ ಮಾಡುತ್ತಿದೆ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದರು.

ಪ್ರಪಂಚಕ್ಕೆ ಲಸಿಕೆಯ ಹಲವಾರು ಶತಕೋಟಿ ಡೋಸ್‌ಗಳ ಅಗತ್ಯವಿದೆ. ಅದರಲ್ಲಿ ಅಮೆರಿಕ 50 ಕೋಟಿ ಡೋಸ್‌ಗಳನ್ನು ನೀಡಲು ಬದ್ಧವಾಗಿದೆ ಎಂದು ಬೈಡನ್‌ ಮಂಗಳವಾರ ಶ್ವೇತಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ನಾವು ಲಸಿಕೆಯ 50 ಕೋಟಿ ಡೋಸ್‌ಗಳನ್ನು ಪೂರೈಸಲು ಬದ್ಧರಾಗಿದ್ದೇವೆ. ಅದಕ್ಕಿಂತಲೂ ಹೆಚ್ಚಿನದ್ದನು ಒದಗಿಸಲು ಪ್ರಯತ್ನಿಸುತ್ತಿದ್ದೇವೆ. ಅಲ್ಲದೆ ಲಸಿಕೆ ಉತ್ಪಾದಿಸುವಂತಹ ಸಾಮರ್ಥ್ಯ ಹೊಂದಿರುವ ಭಾರತದಂತಹ ದೇಶಗಳಿಗೆ ಲಸಿಕೆ ಉತ್ಪಾದನೆಗೆ ನೆರವು ನೀಡುವುದನ್ನು ಮುಂದುವರಿಸುತ್ತೇವೆ’ ಎಂದು ಅವರು ಪ್ರತಿಕ್ರಿಯಿಸಿದರು.

‘ಅಗತ್ಯವಿರುವ ದೇಶಗಳಿಗೆ ನಾವು ಲಸಿಕೆಯ ಡೋಸ್‌ಗಳನ್ನು ಉಚಿತವಾಗಿ ನೀಡಲಿದ್ದೇವೆ’ ಎಂದು ಅವರು ಹೇಳಿದರು.

‘ಅಮೆರಿಕವು ಲಸಿಕೆಗಳ ಸಂಗ್ರಹಗಾರನಾಗಲು ಬದ್ಧವಾಗಿದೆ. ಈ ಹಿಂದೆ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅಮೆರಿಕ ಪ್ರಜಾಪ್ರಭುತ್ವದ ರಕ್ಷಕನ ಪಾತ್ರ ನಿರ್ವಹಿಸಿತ್ತು’ ಎಂದು ಬೈಡನ್‌ ಸ್ಮರಿಸಿದರು.

‘21ನೇ ಶತಮಾನದಲ್ಲಿ ಪ್ರಜಾಪ್ರಭುತ್ವ ಮತ್ತು ನಿರಂಕುಶಾಧಿಕಾರಿ ದೇಶಗಳ ನಡುವೆ ನಡೆಯುತ್ತಿರುವ ಪೈಪೋಟಿಯಲ್ಲಿ ಪ್ರಜಾಪ್ರಭುತ್ವ ದೇಶಗಳ ಸಾಮರ್ಥ್ಯವನ್ನು ನಾವು ಸಾಬೀತುಪಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಅಮೆರಿಕದ ಪಾತ್ರ ಮಹತ್ವದ್ದಾಗಿದೆ. ಅದನ್ನು ನಾವು ಸಮರ್ಪಕವಾಗಿ ನಿರ್ವಹಿಸಲಿದ್ದೇವೆ’ ಎಂದು ಅವರು ಹೇಳಿದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು