ಬುಧವಾರ, ಜುಲೈ 28, 2021
21 °C

ಹೋಳಿ ಹಬ್ಬದ ಶುಭ ಕೋರಿದ ಕಮಲಾ ಹ್ಯಾರಿಸ್

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಭಾರತೀಯರು ಸೇರಿದಂತೆ ಸರ್ವರಿಗೂ ಹೋಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ಈ ಹಬ್ಬವು ಸಕಾರಾತ್ಮಕತೆ ತುಂಬಲಿದೆ ಮತ್ತು ನಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಎಲ್ಲರೂ ಒಂದಾಗಬೇಕೆಂಬ ಸಂದೇಶವನ್ನು ಸಾರುತ್ತದೆ ಎಂದವರು ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕಮಲಾ ಹ್ಯಾರಿಸ್ 'ಹ್ಯಾಪಿ ಹೋಳಿ! ಹೋಳಿ ಹಬ್ಬವು ಸ್ನೇಹಿತರು ಹಾಗೂ ಪ್ರೀತಿಪಾತ್ರರಿಗೆ ಬಣ್ಣಗಳನ್ನು ಹಚ್ಚುವುದಕ್ಕೆ ಹೆಸರುವಾಸಿಯಾಗಿದೆ. ಹೋಳಿ ಸಂತೋಷದ ಹಬ್ಬವಾಗಿದ್ದು, ಸಕಾರಾತ್ಮಕತೆ ತುಂಬಲಿದೆ. ಈ ಕಠಿಣ ಸಂದರ್ಭದಲ್ಲಿ ವಿಶ್ವದ ಎಲ್ಲ ಸಮುದಾಯಗಳಿಗೂ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ನಾವೆಲ್ಲರೂ ಒಂದಾಗಬೇಕೆಂಬ ಸಂದೇಶವನ್ನು ಸಾರುತ್ತದೆ ಎಂದು ಉಲ್ಲೇಖಿಸಿದ್ದಾರೆ.

 

 

 

ಹೋಳಿ ಹಬ್ಬವನ್ನು ಮಾರ್ಚ್ 28 ಹಾಗೂ 29ರಂದು ಆಚರಿಸಲಾಗುತ್ತದೆ. ಹಿಂದೂ ಧರ್ಮದ ಪ್ರಮುಖ ಹಬ್ಬವಾದರೂ ಇತರೆ ಧರ್ಮದ ಜನರು ಇದನ್ನು ಆಚರಿಸುತ್ತಾರೆ. ಇದು ದೇಶದಲ್ಲಿ ವಸಂತ ಸುಗ್ಗಿಯ ಋತುವಿನ ಆಗಮನವನ್ನು ಸೂಚಿಸುತ್ತದೆ.

ಇದನ್ನೂ ಓದಿ: 

 

ಭಾರತ ಸಂಜಾತೆ 56 ವರ್ಷದ ಕಮಲಾ ಹ್ಯಾರಿಸ್ ಹೊಸ ವರ್ಷಾರಂಭದಲ್ಲಿ ಅಮೆರಿಕದ 49ನೇ ಉಪಾಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ್ದರು. ಅಮೆರಿಕ ಉಪಾಧ್ಯಕ್ಷೆ ಅಲಂಕರಿಸುತ್ತಿರುವ ದಕ್ಷಿಣ ಏಷ್ಯಾದ ಮೊದಲ ಉಪಾಧ್ಯಕ್ಷೆ ಮತ್ತು ಮೊದಲ ಕಪ್ಪುವರ್ಣೀಯ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರವಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು