ಸೋಮವಾರ, ಜನವರಿ 18, 2021
15 °C

ಮುಂಬೈ ದಾಳಿಯ ಪ್ರಮುಖ ಆರೋಪಿ ಲಖ್ವಿಯ ಬಂಧನ ಸ್ವಾಗತಾರ್ಹ: ಅಮೆರಿಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಮುಂಬೈ ದಾಳಿಯ ಆರೋಪಿ ಮತ್ತು ಲಷ್ಕರ್‌ ಎ–ತಯಬಾದ (ಎಲ್‌ಇಟಿ) ಆಪರೇಷನ್‌ ಕಮಾಂಡರ್‌ ಝಕಿ ಉರ್‌– ರೆಹಮಾನ್‌ ಲಖ್ವಿಯ ಬಂಧನವನ್ನು ಅಮೆರಿಕ ಸ್ವಾಗತಿಸಿದೆ. ಭಯೋತ್ಪಾದನೆ ಮತ್ತು ಉಗ್ರ ಸಂಘಟನೆಗೆ ಹಣಕಾಸು ನೆರವು ನೀಡದಂತೆ ತಡೆಯುವಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ ಎಂದು ಅಮೆರಿಕ ಹೇಳಿದೆ.

ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ನೀಡಿದ ಆರೋಪದಡಿ ಲಖ್ವಿಯನ್ನು ಶನಿವಾರ ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ.

ಮುಂಬೈ ದಾಳಿಯ ಪ್ರಮುಖ ಆರೋಪಿ, ನಿಷೇಧಿತ ಉಗ್ರ ಲಖ್ವಿ, 2015ರಿಂದ ಜಾಮೀನು ಪಡೆದು ಹೊರಗಿದ್ದ. ಆತನನ್ನು ಪಂಜಾಬ್‌ನ ಭಯೋತ್ಪಾದನಾ ನಿಗ್ರಹ ಇಲಾಖೆಯು (ಸಿಟಿಡಿ) ಶನಿವಾರ ಬಂಧಿಸಿದೆ.

‘ಉಗ್ರ ನಾಯಕ ಝಕಿ ಉರ್‌– ರೆಹಮಾನ್‌ ಲಖ್ವಿಯ ಬಂಧನವನ್ನು ಅಮೆರಿಕ ಸ್ವಾಗತಿಸಿದೆ. ಭಯೋತ್ಪಾದನೆ ಮತ್ತು ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ನೀಡದಂತೆ ತಡೆಯಲು ಈ ಕ್ರಮ ಅಗತ್ಯವಾಗಿತ್ತು’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ದಕ್ಷಿಣ ಮತ್ತು ಮಧ್ಯ ಏಷ್ಯಾ ಬ್ಯೂರೊ ಟ್ವೀಟ್‌ ಮಾಡಿದೆ.

‘ಲಖ್ವಿ ವಿರುದ್ಧದ ಕಾನೂನು ಕ್ರಮ ಮತ್ತು ಶಿಕ್ಷೆಗಳ ಮೇಲೆ ನಾವು ನಿಗಾ ವಹಿಸುತ್ತೇವೆ. ಮುಂಬೈ ದಾಳಿಗಾಗಿ ಆತನಿಗೆ ಶಿಕ್ಷೆಯಾಗಬೇಕು’ ಎಂದು ಬ್ಯುರೊ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು