ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್ ಬೆಂಬಲಿತ ಉಗ್ರರ ತಾಣಗಳ ಮೇಲೆ ಅಮೆರಿಕ ವೈಮಾನಿಕ ದಾಳಿ

ಅಧ್ಯಕ್ಷ ಜೋ ಬೈಡನ್ ನಿರ್ದೇಶನದ ಮೇಲೆ ದಾಳಿ: ಜಾನ್ ಕಿರ್ಬಿ
Last Updated 28 ಜೂನ್ 2021, 5:16 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಸಿರಿಯಾ ಮತ್ತು ಇರಾಕ್‌ ಗಡಿಯಲ್ಲಿನ ಇರಾನ್‌ ಬೆಂಬಲಿತ ಉಗ್ರಗಾಮಿಗಳ ಗುಂಪಿನ ಮೂರು ಶಸ್ತ್ರಾಸ್ತ್ರ ಸಂಗ್ರಹಗಾರಗಳನ್ನು ಗುರಿಯಾಗಿಸಿಕೊಂಡು ಭಾನುವಾರ ಅಮೆರಿಕ ವೈಮಾನಿಕ ದಾಳಿ ನಡೆಸಿದೆ.

ಇರಾಕ್‌ನಲ್ಲಿದ್ದ ಅಮೆರಿಕದ ಪಡೆಗಳ ಮೇಲೆ ಇತ್ತೀಚೆಗೆ ಈ ಉಗ್ರಗಾಮಿ ಗುಂಪುಗಳು ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಈ ವೈಮಾನಿಕ ದಾಳಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೆಂಟಗನ್ ಮಾಧ್ಯಮ ಕಾರ್ಯದರ್ಶಿ ಜಾನ್ ಕಿರ್ಬಿ ತಿಳಿಸಿದ್ದಾರೆ.

ಅಧ್ಯಕ್ಷ ಜೋ ಬೈಡನ್ ಅವರ ನಿರ್ದೇಶನದ ಮೇರೆಗೆ ಅಮೆರಿಕದ ಮಿಲಿಟರಿ ಪಡೆಗಳು ಇರಾನ್‌ ಬೆಂಬಲಿತ ಉಗ್ರಗಾಮಿ ಗುಂಪುಗಳ ವಿರುದ್ಧ ವೈಮಾನಿಕ ದಾಳಿ ನಡೆಸಿವೆ ಎಂದು ಅವರು ಹೇಳಿದ್ದಾರೆ.

ಅಮೆರಿಕ ಸೇನಾಪಡೆಗಳು, ಸಿರಿಯಾದಲ್ಲಿರುವ ಎರಡು ಮತ್ತು ಇರಾಕ್‌ನ ಒಂದು ಶಸ್ತ್ರಾಸ್ತ್ರ ಸಂಗ್ರಹಗಾರಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿವೆ ಎಂದು ಕಿರ್ಬಿ ಹೇಳಿದರು.

‘ಇರಾನ್‌ ಬೆಂಬಲಿತ ಸೇನಾಪಡೆಗಳ ದಾಳಿಯಿಂದ ರಕ್ಷಿಸಿಕೊಳ್ಳುವುದಕ್ಕಾಗಿ ಕೈಗೊಂಡ ರಕ್ಷಣಾತ್ಮಕ ವೈಮಾನಿಕ ದಾಳಿ ಇದು‘ ಎಂದು ಕಿರ್ಬಿ ದಾಳಿಯನ್ನು ಸಮರ್ಥಿಸಿಕೊಂಡಿದ್ದಾರೆ.

‘ಅಮೆರಿಕ, ಮುಂದೆ ಉಂಟಾಗಬಹುದಾದ ಅಪಾಯಗಳನ್ನು ತಪ್ಪಿಸಲು ಸಕಾಲದಲ್ಲಿ ಅಗತ್ಯ ಹಾಗೂ ಸೂಕ್ತವಾದ ಕ್ರಮವನ್ನು ಕೈಗೊಂಡಿದೆ. ಈ ಮೂಲಕ ರಾಷ್ಟ್ರದ ಸೇನೆ ವಿರುದ್ಧ ದಾಳಿ ಮಾಡುವವರಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದೆ‘ ಎಂದು ಕಿರ್ಬಿ ಹೇಳಿದರು.

ಜೋ ಬೈಡನ್ ಅಧಿಕಾರಕ್ಕೆ ಬಂದ ನಂತರ, ಸಿರಿಯಾ – ಇರಾಕ್ ಗಡಿಯ ಮೇಲೆ ಎರಡನೇ ಬಾರಿ ಅಮೆರಿಕದ ಸೇನಾ ಪಡೆಗಳು ದಾಳಿ ನಡೆಸಿವೆ. ಈ ಮೊದಲು ಫೆಬ್ರುವರಿಯಲ್ಲಿ ಪೂರ್ವ ಸಿರಿಯಾದ ಮೇಲೆ ಇಂಥದ್ದೊಂದು ದಾಳಿ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT