ಶನಿವಾರ, ಜೂನ್ 25, 2022
28 °C

ಕೋವಿಡ್‌: ಲಸಿಕೆಗಳು ನೈಸರ್ಗಿಕ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತವೆ–ಅಧ್ಯಯನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಕೋವಿಡ್‌ ಲಸಿಕೆಯು ಕೊರೊನಾ ಸೋಂಕಿತರಲ್ಲಿ ನೈಸರ್ಗಿಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜತೆಗೆ ಹೊಸ ರೂಪಾಂತರಿತ ವೈರಸ್‌ಗಳಿಂದಲೂ ರಕ್ಷಿಸುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.

ಅಮೆರಿಕದ ರಾಕೆಫೆಲ್ಲರ್‌ ವಿಶ್ವವಿದ್ಯಾಲಯದ ಸಂಶೋಧಕರು ಕೋವಿಡ್‌ ರೋಗಿಗಳ ರಕ್ತದಲ್ಲಿ ಇರುವ ಪ್ರತಿಕಾಯಗಳನ್ನು ವಿಶ್ಲೇಷಿಸಿ, ಈ ವಿಕಾಸವನ್ನು ಪತ್ತೆ ಹಚ್ಚಿದ್ದಾರೆ.

ಕಳೆದ ವರ್ಷ ಕೋವಿಡ್‌ ಅಲೆಯ ಸಂದರ್ಭದಲ್ಲಿ 63 ಜನರನ್ನು ಇದಕ್ಕಾಗಿ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಈ ಅಧ್ಯಯನ ಇನ್ನೂ ಉನ್ನತ ತಜ್ಞರಿಂದ ಪರಿಶೀಲನೆಗೆ ಒಳಗಾಗಿಲ್ಲ.

ಕಾಲಾನಂತರದಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ‘ಮೆಮೊರಿ ಬಿ’ ಜೀವಕೋಶಗಳಿಂದ ಉತ್ಪತ್ತಿಯಾಗುವ ಪ್ರತಿಕಾಯಗಳು ಕೋವಿಡ್‌ಗೆ ಕಾರಣವಾಗುವ ವೈರಾಣುವನ್ನು ತಟಸ್ಥಗೊಳಿಸುವಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತವೆ ಎಂಬುದು ದತ್ತಾಂಶಗಳಿಂದ ತಿಳಿದುಬಂದಿದೆ ಎನ್ನುತ್ತದೆ ಅಧ್ಯಯನ.

ಇದರಿಂದಾಗಿ ಜನರು ವೈರಸ್‌ ವಿರುದ್ಧ ಸುಧಾರಿತ ಮತ್ತು ದೀರ್ಘಕಾಲೀನ ರಕ್ಷಣೆಯನ್ನು ವೃದ್ಧಿಸಿಕೊಳ್ಳುತ್ತಿದ್ದಾರೆ.

ಮಾಡರ್ನಾ ಅಥವಾ ಫೈಜರ್‌ ಲಸಿಕೆಯ ಒಂದು ಡೋಸ್‌ ಪಡೆದಿರುವ 26 ಜನರಲ್ಲಿ ಪ್ರತಿಕಾಯಗಳು ಮತ್ತಷ್ಟು ಹೆಚ್ಚಾಗಿವೆ. ಅಲ್ಲದೆ ಬ್ರಿಟನ್‌, ದಕ್ಷಿಣ ಆಫ್ರಿಕಾ, ನ್ಯೂಯಾರ್ಕ್ ರೂಪಾಂತರಿತ ವೈರಸ್‌ಗಳ ಮೇಲೂ ಹೆಚ್ಚು ಪರಿಣಾಮಕಾರಿಯಾಗಿವೆ ಎಂದು ಅಧ್ಯಯನ ತಿಳಿಸಿದೆ.

ಒಮ್ಮೆಯೂ ಸೋಂಕಿಗೆ ತುತ್ತಾಗದವರಿಗೆ ಲಸಿಕೆಗಳ ಜತೆಗೆ ಸಮಯಕ್ಕೆ ಸರಿಯಾಗಿ ಇಮ್ಯುನಿಟಿ ಬೂಸ್ಟರ್‌ಗಳು ದೊರೆತರೆ ಹೆಚ್ಚುವರಿ ರಕ್ಷಣೆ ದೊರೆತಂತಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು