ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಡ್‌: ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆ, ಕೆಲವೇ ಗಂಟೆಗಳಲ್ಲಿ ಸಾವು

Last Updated 20 ಏಪ್ರಿಲ್ 2021, 12:39 IST
ಅಕ್ಷರ ಗಾತ್ರ

ಎನ್‌ಜಮೇನಾ: ಸುಮಾರು ಮೂರು ದಶಕಗಳ ಕಾಲ ಮಧ್ಯ ಆಫ್ರಿಕಾದ ದೇಶ ಚಾಡ್‌ ಅನ್ನು ಆಳಿದ ಅಧ್ಯಕ್ಷ ಇದ್ರಿಸ್‌ ಡೆಬಿ ಅವರು ಮಂಗಳವಾರ ಬಂಡುಕೋರರ ವಿರುದ್ಧ ಹೋರಾಟದ ಕಣದಲ್ಲಿ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಸೇನೆಯು ನ್ಯಾಷನಲ್‌ ಟೆಲಿವಿಷನ್‌ ಮತ್ತು ರೇಡಿಯೊದಲ್ಲಿ ಬಿತ್ತರಿಸಿದೆ.

ಏಪ್ರಿಲ್‌ 11ರ ಅಧ್ಯಕ್ಷೀಯ ಚುನಾವಣೆಯಲ್ಲಿ, 68 ವರ್ಷದ ಡೆಬಿ ಜಯಗಳಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ಘೋಷಿಸಿದ ಕೆಲವೇ ಗಂಟೆಗಳಲ್ಲಿ ಅವರ ಸಾವಿನ ಸುದ್ದಿ ಪ್ರಸಾರವಾಗಿದೆ. ಮರು ಆಯ್ಕೆಯಾಗಿದ್ದ ಕಾರಣ ಅವರಿಗೆ ಮತ್ತೆ ಆರು ವರ್ಷಗಳ ಅಧಿಕಾರ ನಡೆಸಲು ಅವಕಾಶ ದೊರಕಿತ್ತು.

ಬಂಡುಕೋರರ ಜೊತೆ ಹೋರಾಟದ ತಾಣ ದೇಶದ ಇನ್ನೊಂದು ಮೂಲೆಯದಲ್ಲಿದ್ದ ಕಾರಣ ಅವರ ಸಾವು ಯಾವ ಸಂದರ್ಭದಲ್ಲಿ ಹೇಗೆ ಸಂಭವಿಸಿದೆ ಎಂಬುದು ತಕ್ಷಣಕ್ಕೆ ಖಚಿತವಾಗಿಲ್ಲ. ಅವರು ತಮ್ಮ ಆಡಳಿತ ವಿರೋಧಿಸುತ್ತಿದ್ದ ದೇಶದ ಉತ್ತರ ಭಾಗಕ್ಕೆ ಏಕೆ ಹೋಗಿದ್ದರು ಎಂಬುದು ಗೊತ್ತಾಗಿಲ್ಲ. ಬಂಡುಕೋರರು ನೆರೆಯ ಲಿಬಿಯಾದಲ್ಲಿ ತರಬೇತಿ ಪಡೆದು ಶಸ್ತ್ರಸಜ್ಜಿತರಾಗಿ ಉತ್ತರದ ಗಡಿಯೊಳಗೆ ನುಗ್ಗಿದ್ದರು.

ಸೇನೆಯ ಮಾಜಿ ಕಮಾಂಡರ್‌ –ಇನ್‌–ಚೀಫ್‌ ಆಗಿರುವ ಡೆಬಿ, 1990ರಲ್ಲಿ ಮೊದಲ ಬಾರಿ ಅಧಿಕಾರಕ್ಕೆ ಬಂದಿದ್ದರು. ಅವರ ನೇತೃತ್ವದ ಬಂಡುಕೋರರ ಪಡೆ ಆಗಿನ ಅಧ್ಯಕ್ಷ ಹಿಸ್ಸೇನ್‌ ಹೆಬ್ರೆ ಅವರನ್ನು ಪದಚ್ಯತಗೊಳಿಸಿತ್ತು. ಸೆನೆಗಲ್‌ನಲ್ಲಿ ನಡೆದ ಅಂತರರಾಷ್ಟ್ರೀಯ ನ್ಯಾಯಮಂಡಳಿ ನಡೆಸಿದ ವಿಚಾರಣೆಯಲ್ಲಿ ಹೆಬ್ರೆ ಮಾನವಹಕ್ಕುಗಳ ಉಲ್ಲಂಘನೆ ನಡೆಸಿದ್ದು ಶಿಕ್ಷೆಗೆ ಒಳಗಾಗಿದ್ದರು.

ಬಂಡುಕೋರರ ಪಡೆಯು ನೆರೆಯ ಲಿಬಿಯಾದಲ್ಲಿ ಶಸ್ತ್ರಾಸ್ತ್ರಗಳ ಬಳಕೆಯ ತರಬೇತಿ ಪಡೆದು ಉತ್ತರದಲ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT