ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಂಗ್‌ಕಾಂಗ್‌: ಕೋವಿಡ್‌ ಹೆಚ್ಚಳ- ತೀವ್ರಗೊಂಡ ಐದನೇ ಅಲೆ

ತೀವ್ರಗೊಂಡ ಐದನೇ ಅಲೆ: ಕ್ಯಾರಿ ಲ್ಯಾಮ್
Last Updated 15 ಫೆಬ್ರುವರಿ 2022, 11:34 IST
ಅಕ್ಷರ ಗಾತ್ರ

ಹಾಂಗ್‌ಕಾಂಗ್: ಹಾಂಗ್‌ಕಾಂಗ್‌ನಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿವೆ ಎಂದುಮುಖ್ಯ ಕಾರ್ಯನಿರ್ವಾಹಕಿ ಕ್ಯಾರಿ ಲ್ಯಾಮ್ ಹೇಳಿದ್ದಾರೆ ಮಂಗಳವಾರ ಹೇಳಿದ್ದಾರೆ.

‘ಕೋವಿಡ್‌ ಎದುರಿಸಲು ಮಾಡಿಕೊಂಡಿದ್ದ ಸಿದ್ಧತೆಗಳು ಸಾಕಾಗದು ಎನಿಸುವಷ್ಟರ ಮಟ್ಟಿಗೆ ಕೋವಿಡ್‌–19 ಪ್ರಕರಣಗಳಲ್ಲಿ ಹೆಚ್ಚಳ ಕಂಡುಬರುತ್ತಿದೆ’ ಎಂದಿರುವ ಅವರು, ಕೋವಿಡ್ ಪ್ರಸರಣ ತಡೆಗಾಗಿ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.

‘ನಗರದಲ್ಲಿ ಕೋವಿಡ್‌ನ ಐದನೇ ಅಲೆ ತೀವ್ರತೆ ಹೆಚ್ಚುತ್ತಿದ್ದು, ಸೋಂಕು ಪ್ರಸರಣ ತಡೆಗಾಗಿ ಮಾಡಿಕೊಂಡಿರುವ ಸಿದ್ಧತೆ–ಕ್ರಮಗಳಿಗೆ ಎಟುಕದ ರೀತಿಯಲ್ಲಿ ಪ್ರಕರಣಗಳು ಹೆಚ್ಚುತ್ತಿವೆ’ ಎಂದು ಅವರು ಹೇಳಿದ್ದಾರೆ.

ನಗರದಲ್ಲಿ ಮಾರ್ಚ್‌ 6ರ ವರೆಗೆ ಶಾಲೆಗಳನ್ನು ಬಂದ್‌ ಮಾಡಲಾಗಿದೆ. ಸಂಜೆ 6ರ ನಂತರ ಸಾರ್ವಜನಿಕ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ.

ಮಂಗಳವಾರ 4,500 ಪ್ರರಕಣಗಳು ವರದಿಯಾಗಿವೆ. ಸೋಮವಾರ 2,071 ಪ್ರಕರಣಗಳು ವರದಿಯಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT