ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡೊ–ಪೆಸಿಫಿಕ್‌ ವಲಯ: ಮುಕ್ತ ಕಾರ್ಯವಿಧಾನ ಉತ್ತೇಜಿಸುವಲ್ಲಿ ಇಎಎಸ್‌ ಪಾತ್ರ ಮಹತ್ವ

ಉಪರಾಷ್ಟ್ರಪತಿ ಜಗದೀಪ್‌ ಧನಕರ್‌
Last Updated 13 ನವೆಂಬರ್ 2022, 12:37 IST
ಅಕ್ಷರ ಗಾತ್ರ

ನಾಮ್‌ ಪೆನ್‌ (ಪಿಟಿಐ): ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರು ಆಹಾರ ಮತ್ತು ಇಂಧನ ಭದ್ರತೆ ಕುರಿತ ಜಾಗತಿಕ ಕಾಳಜಿಗಳ ಕುರಿತು ಭಾನುವಾರ ಮಾತನಾಡಿದ್ದಾರೆ.

17ನೇ ಪೂರ್ವ ಏಷ್ಯಾ ಸಮ್ಮೇಳನದಲ್ಲಿ (ಇಎಎಸ್‌) ಪಾಲ್ಗೊಂಡಿರುವ ಅವರು, ‘ಇಂಡೊ–ಪೆಸಿಫಿಕ್‌ ವಲಯದಲ್ಲಿ ಉಚಿತ, ಮುಕ್ತ ಮತ್ತು ಒಳಗೊಳ್ಳುವಿಕೆಯ ಕಾರ್ಯವಿಧಾನ ಉತ್ತೇಜಿಸುವಲ್ಲಿ ಇಎಎಸ್‌ನ ‍ಪಾತ್ರ ಮಹತ್ವದ್ದಾಗಿದೆ’ ಎಂದು ಒತ್ತಿ ಹೇಳಿದ್ದಾರೆ.

‘ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷಕ್ಕೆ (2023) ಎಲ್ಲರೂ ತಮ್ಮದೇ ಆದ ಕೊಡುಗೆಗಳನ್ನು ನೀಡಬೇಕು’ ಎಂದು ಇಎಎಸ್‌ ಸದಸ್ಯ ರಾಷ್ಟ್ರಗಳಿಗೆ ಮನವಿ ಮಾಡಿದ್ದಾರೆ.

ಇಂಡೊ–ಪೆಸಿಫಿಕ್‌ ವಲಯದಲ್ಲಿ ಯಥಾಸ್ಥಿತಿ ಬದಲಿಸುವ ಅಥವಾ ಉದ್ವಿಗ್ನತೆ ಹೆಚ್ಚಿಸುವ ಯಾವುದೇ ಏಕಪಕ್ಷೀಯ ಕ್ರಮವನ್ನು ತೀವ್ರವಾಗಿ ಖಂಡಿಸುವುದಾಗಿ ಭಾರತ, ಆಸ್ಟ್ರೇಲಿಯಾ, ಜಪಾನ್‌ ಮತ್ತು ಅಮೆರಿಕವನ್ನು ಒಳಗೊಂಡ ‘ಕ್ವಾಡ್‌’ ಗುಂಪು ಹೇಳಿದೆ. ಈ ಪ್ರದೇಶದಲ್ಲಿ ಚೀನಾದ ಬೆದರಿಕೆಯ ವರ್ತನೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಎಚ್ಚರಿಕೆಯನ್ನು ನೀಡಿವೆ.

ಸಮ್ಮೇಳನದ ಹಿನ್ನೆಲೆಯಲ್ಲಿ ಕಾಂಬೋಡಿಯಾಕ್ಕೆ ಮೂರು ದಿನಗಳ ಪ್ರವಾಸ ಕೈಗೊಂಡಿರುವ ಧನಕರ್‌ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರನ್ನೂ ಭೇಟಿಯಾಗಿ ಚರ್ಚಿಸಿದ್ದಾರೆ.

ಬ್ಲಿಂಕೆನ್‌ ಜೊತೆ ಜೈಶಂಕರ್‌ ಚರ್ಚೆ

ಸಮ್ಮೇಳನದಲ್ಲಿ ಭಾಗವಹಿಸಿರುವ‌ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್‌ ಅವರನ್ನು ಭೇಟಿಯಾಗಿ ಉಕ್ರೇನ್‌ ಬಿಕ್ಕಟ್ಟಿನ ಕುರಿತು ಚರ್ಚಿಸಿದ್ದಾರೆ.

ಇಂಡೊ–ಪೆಸಿಫಿಕ್‌ ವಲಯದಲ್ಲಿನ ಕಾರ್ಯತಂತ್ರ ಹಾಗೂ ದ್ವಿಪಕ್ಷೀಯ ಸಂಬಂಧದ ಕುರಿತೂ ಮಾತುಕತೆ ನಡೆಸಿದ್ದಾರೆ.

‘ಬ್ಲಿಂಕೆನ್‌ ಜೊತೆಗಿನ ಭೇಟಿಯ ವೇಳೆ ಉಕ್ರೇನ್‌ ಬಿಕ್ಕಟ್ಟು, ಇಂಡೊ–ಪೆಸಿಫಿಕ್‌, ಇಂಧನ, ಜಿ–20 ಮತ್ತು ದ್ವಿಪಕ್ಷೀಯ ಬಾಂಧವ್ಯದ ಕುರಿತು ಚರ್ಚಿಸಲಾಯಿತು’ ಎಂದು ಜೈಶಂಕರ್‌ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT